ಗುರಿ ಸಾಧನೆಗೆ ನಿರಂತರ ಪ್ರಯತ್ನವಿರಲಿ

14 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಆತ್ಮಸ್ಥೆರ್ಯ ಇರಬೇಕು. ವಿದ್ಯಾರ್ಥಿ ದಿಸೆಯಲ್ಲೇ ಕರ್ತವ್ಯ ಪ್ರಜ್ಞೆ, ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ಹೇಳಿದರು.
ರಾಯಾಪುರದ ಎಸ್​ಜೆಎಂವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾಷಿರ್ಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಕಲಾ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಆಲಸ್ಯ, ಚಂಚಲತೆ, ಗರ್ವ, ಅಹಂ, ದುರಾಭ್ಯಾಸ, ಉದ್ಧತಟತನಗಳಿಂದ ದೂರವಿರಬೇಕು. ಸಾಧನೆಗೆ ಬಡತನ ಅಡ್ಡ ಬರುವುದಿಲ್ಲ. ಆದರೆ ಸಾಧನೆಯ ಛಲದೊಂದಿಗೆ ಗುರಿ ತಲುಪುವ ಪ್ರಯತ್ನ ಮಾಡಬೇಕು. ಸರ್ಕಾರಿ ನೌಕರಿಗೆ ಬೆನ್ನು ಹತ್ತದೆ, ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶಾಂತಯ್ಯ ಕೆ.ಎಸ್​. ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದರು.
ಪ್ರಧಾನಮಂತ್ರಿ ಮೋದಿ ಅವರಿಂದ ಲಖಪತಿ ದೀದಿ ಪ್ರಶಸ್ತಿ ಪುರಸ್ಕ್ರುತರಾದ ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಝಾನ್ಸಿ ಲಕ್ಷ್ಮಿ ಪವಾರ, ಮಾರ್ತಾಂಡಪ್ಪ ಕತ್ತಿ, ಕೋಮಲ್​ ಗಾನದಾಳ ಅವರನ್ನು ಎಸ್​.ವಿ ಸಂಕನೂರ ಸನ್ಮಾನಿಸಿದರು. ಕಾಲೇಜಿನ ಪತ್ರಿಕೋದ್ಯಮ ವಿದ್ಯಾಥಿರ್ಗಳ ಪ್ರಾಯೋಗಿಕ ಪತ್ರಿಕೆ ಮಹಾಂತ ವಾಣಿ ತ್ರೈ ಮಾಸಿಕ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಪಾಲಿಕೆ ಸದಸ್ಯೆ ನೀಲವ್ವ ಅರವಾಳದ, ಪ್ರೊ.ಜಿ. ಸಿ. ಕಡ್ಡಿಪುಡಿ, ಪ್ರೊ. ಎಂ.ಬಿ. ಅಳಗವಾಡಿ, ಪ್ರೊ. ಕೆ.ಎಸ್​. ಮೇಲಮಾಳಾಗಿ, ಶಿಕ್ಷಕರು, ಇತರರು ಇದ್ದರು.
ಪ್ರೊ. ಸಿ.ಕೆ. ಹುಬ್ಬಳ್ಳಿ ಸ್ವಾಗತಿಸಿದರು. ಡಾ. ಪುಷ್ಪಾ ಬಸನಗೌಡರ ವಾರ್ಷಿಕ ವರದಿ ವಾಚಿಸಿದರು. ಪ್ರೊ. ಜೆ.ಪಿ.ಯಂಡಿಗೇರಿ, ಸುರೇಖಾ ಹುಡೇದ ನಿರೂಪಿಸಿದರು. ಐಶ್ವರ್ಯ ಮಾಳನ್ನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net