ನಿರಂತರ ಕಲಿಕೆ, ಹೊಸ ಅನ್ವೇಷಣೆ ಮನಸ್ಥಿತಿ ಹೊಂದಿ: ವಿದ್ಯಾರ್ಥಿಗಳಿಗೆ ಸಚಿವ ಡಾ. ಎಂ.ಸಿ. ಸುಧಾಕರ್ ಸಲಹೆ

RVCE college
Published on

ಬೆಂಗಳೂರು: ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಜಗತ್ತನ್ನು ಪ್ರತಿ ಕ್ಷಣಕ್ಕೂ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುವ ಕುತೂಹಲ, ಹೊಸ ಆಲೋಚನೆಗಳನ್ನು ಅನ್ವೇಷಿಸುವ ಮತ್ತು ಸಂಶೋಧಿಸುವಂತಹ ಮನಸ್ಥಿತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಸಲಹೆ ನೀಡಿದರು.

ಭಾನುವಾರ ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ 2025-26ನೇ ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವ ‘ನವೋದಯ’ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಗತಿ ಮತ್ತು ಕಲಿಕೆ, ಸಾಧನೆಗಾಗಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುವ ಮನಸ್ಥಿತಿ ಹೊಂದಬೇಕು. ಏಕಾಂಗಿ ಸಾಧನೆ ಕಷ್ಟಸಾಧ್ಯ. ಟೀಮ್ ವರ್ಕ್, ಗುರು ಮತ್ತು ಶಿಷ್ಯರ ನಡುವೆ ಉತ್ತಮ ಒಡನಾಡವಿದ್ದಾಗ ಸಾಧ್ಯವಾಗಲಿದೆ ಎಂದರು.

ಎಐಎಂಎಲ್, ಕ್ವಾಂಟಮ್ ಕಂಪ್ಯೂಟಿಂಗ್ ಸೇರಿ ಹೊಸ ತಂತ್ರಜ್ಞಾನಗಳು ಉದ್ಯೋಗ ಕಸಿಯುತ್ತಿವೆ ಎಂದು ಜನರು ಮಾತನಾಡುತ್ತಿದ್ದಾರೆ. ಆದರೆ, ಅತ್ಯಾಧುನಿಕ ತಂತ್ರಜ್ಞಾನಗಳಿಂದ ಉದ್ಯೋಗ ಸೃಷ್ಟಿಸುವಂತಹ ಕೆಲಸಗಳನ್ನು ಯುವ ಪೀಳಿಗೆ ಮಾಡಬೇಕಿದೆ. ಸ್ವಂತ ಆಲೋಚನೆ ಮಾಡುವಂತಹ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ತಿಳಿಸಿದರು.

ಆರ್‌ವಿ ದೇಶದ ಅತ್ಯುತ್ತಮ ಸಂಸ್ಥೆಗಳಲ್ಲೊಂದು:

ಆರ್.ವಿ ತಾಂತ್ರಿಕ ಶಿಕ್ಷಣಸಂಸ್ಥೆಯು ರಾತ್ರೋರಾತ್ರಿ ಸಾಧನೆ ಮಾಡಿಲ್ಲ. ನಿರಂತರ ಪರಿಶ್ರಮ ಮತ್ತು ಇಡೀ ತಂಡದ ಶ್ರಮದಿಂದ ಸಾಧ್ಯವಾಗಿದೆ. ಎನ್‌ಐಆರ್‌ಎ್ ರ‌್ಯಾಂಕ್‌ನಲ್ಲಿ 100ರೊಳಗೆ ಸ್ಥಾನ ಪಡೆಯುವುದು ಸುಲಭದ ಮಾತಲ್ಲ. ಈ ಎಲ್ಲ ಕಾರಣಗಳಿಮದ ದೇಶದ ಅತ್ಯುತ್ತಮ ಶಂಸ್ಥೆಗಳಲ್ಲಿ ಒಂದಾಗಿದೆ. ಇತರೆ ಶಿಕ್ಷಣ ಸಂಸ್ಥೆಗಳಿಗೂ ಆರ್‌ವಿ ಮಾದರಿ ಕಾರ್ಯ ನಿರ್ವಹಿಸುತ್ತಿದೆ. ಬಲವಾದ ಅಲ್ಯುಮ್ನಿ ಅಸೋಸಿಯೇಷನ್, ಪ್ಲೇಸ್‌ಮೆಂಟ್ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಂಶುಪಾಲ ಡಾ. ಕೆ.ಎನ್. ಸುಬ್ರಮಣ್ಯ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು. ಎನ್‌ಐಆರ್‌ಆ್ ರ‌್ಯಾಂಕ್, 20 ಉತ್ಕ ೃಷ್ಟತಾ ಕೇಂದ್ರಗಳು, ರೋಬೊಟಿಕ್ ತಂತ್ರಜ್ಞಾನ ಅಳವಡಿಕೆ, 250ಕ್ಕೂ ಹೆಚ್ಚು ಸಂಸ್ಥೆಗಳ ಒಡಂಬಡಿಕೆ, ವಾರ್ಷಿಕ ಸರಾಸರಿ 11 ಲಕ್ಷ ರೂ. ಪ್ಲೇಸ್‌ಮೆಂಟ್ ಸೇರಿ ಹಲವು ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕಾಲೇಜಿನ ಸಾಧನೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ. ಎ.ಸಿ. ಚಂದ್ರಶೇಖರ ರಾಜು, ಡಾ. ವಿನೋದ ಹಯಗ್ರೀವ್, ಗೌರವ ಕಾರ್ಯದರ್ಶಿ ಎವಿಎಸ್ ಮೂರ್ತಿ ಸೇರಿ ಹಲವರು ಉಪಸ್ಥಿತರಿದ್ದರು.

ಸಕ್ರಿಯವಾಗಿ ಭಾಗವಹಿಸುವಿಕೆ, ಮೌಲ್ಯಗಳು, ನೈತಿಕತೆ ಮತ್ತು ಸಮಗ್ರತೆಯನ್ನು ಅಳವಡಿಸಿಕೊಳ್ಳುವುದು ಹಾಗೂ ಗುಣಮಟ್ಟವನ್ನು ಗೌರವಿಸುವುದರಿಂದ ಯಶಸ್ಸು ನಿಮ್ಮದಾಗಲಿದೆ. ಇವೆಲ್ಲದರ ಜತೆಗೆ ಆತ್ಮವಿಶ್ವಾಸವಿದ್ದಾಗ ಯಶಸ್ಸು ತಾನಾಗಿಯೇ ದೊರೆಯಲಿದೆ.

- ಡಾ. ಎಂ.ಪಿ. ಶ್ಯಾಮ್, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net