

ರಬಕವಿ/ಬನಹಟ್ಟಿ : ಮಕ್ಕಳು ನಮ್ಮ ನಾಡಿನ ಸಂಪತ್ತು. ಅವರನ್ನು ಆರೋಗ್ಯವಂತರನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಅವಳಿ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಇಂದ್ರಧನುಷ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೋಗಮುಕ್ತ ದೇಶ ಮಾಡುವ ನಿಟ್ಟಿನಲ್ಲಿ ಪ್ರತಿ ಮಗುವಿಗೂ ಲಸಿಕೆ ನೀಡಬೇಕು. ವೈದ್ಯರ ಸಲಹೆಯಂತೆ 5 ವರ್ಷದೊಳಗಿನ ಮಕ್ಕಳು ಲಸಿಕೆ ಪಡೆದುಕೊಳ್ಳಬೇಕು.
ಇದನ್ನೂ ಓದಿ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೋೂಳ್ಳಲಿ
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸಲು ಲಸಿಕಾಕರಣ ಅಗತ್ಯ. ಸರ್ಕಾರ ಉಚಿತವಾಗಿ ಇದನ್ನು ನೀಡುತ್ತಿದ್ದು, ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ನರಸಿಂಹ ಗಲಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾದೇವ ಕೋಟ್ಯಾಳ, ಈರಣ್ಣ ಚಿಚಖಂಡಿ, ರವಿ ಕೊರ್ತಿ, ಅಶೋಕ ರಾವಳ, ಶಿವಾನಂದ ಕಾಗಿ, ಸುಭಾಷ ಚೋಳಿ, ಮಹಾದೇವ ಪಾಲಬಾಂವಿ, ಈಶ್ವರ ಕಾಡದೇವರ, ಈಶ್ವರ ಪಾಟೀಲ, ಭೀಮಸಿ ಹಂದಿಗುಂದ, ಡಾ. ಎನ್. ಎಂ. ನದಾಫ್, ಡಾ. ವಿರೇಶ ಹುಡೇದಮನಿ, ಅಪ್ಪಾಜಿ ಹೂಗಾರ, ಎಂ. ಕೆ. ಮುಲ್ಲಾ, ಗಂಗಾಧರ ಗೊಬ್ಬಾಣಿ, ಬಿ. ಎಸ್. ಪಟ್ಟಣಶೆಟ್ಟಿ, ಪಾಂಡು ಯರಕನ್ನವರ, ಡಾ. ಕಾವೇರಿ ಸೋರಗಾವಿ, ಡಾ. ಸುನೀಲ ಹನಗಂಡಿ, ಡಾ. ಪ್ರೇಮಾ ತುಂಗಳ, ಮಲ್ಲು ಪವಾಡಿ ಇತರರಿದ್ದರು.