ಕೀಳುಮಟ್ಟದ ರಾಜಕಾರಣ ಮಾಡುತ್ತಿರುವ ಬಿಜೆಪಿ ದೂರವಿಡಿ

25 kldg -1
ಲೋಕಸಭಾ ಚುನಾವಣೆಯ ನಿಮಿತ್ತ ಗೋವಿಂದಕೊಪ್ಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಶಾಸಕ ಜೆ.ಟಿ.ಪಾಟೀಲ ಮತಯಾಚಿಸಿದರು. ಮುಖಂಡರಾದ ಅಜಯಕುಮಾರ ಸರನಾಯಕ, ಬಸವಪ್ರಭು ಸರನಾಡಗೌಡ ಇತರರಿದ್ದರು.
Published on

ಕಲಾದಗಿ: ದೇಶದ ಅಭಿವೃದ್ಧಿಗೆ, ನಮ್ಮೆಲ್ಲರ ಬದುಕಿನ ಏಳಿಗೆಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಲೋಕಸಭಾ ಚುನಾವಣೆ ನಿಮಿತ್ತ ಗುರುವಾರ ಸಮೀಪದ ಗೋವಿಂದಕೊಪ್ಪ, ಅಂಕಲಗಿ, ಶಾರದಾಳ ಹಾಗೂ ಉದಗಟ್ಟಿಗಳಲ್ಲಿ ಮನೆ ಮನೆಗಳಿಗೆ ಗ್ಯಾರಂಟಿ ಪತ್ರ ವಿತರಿಸಿದ ಬಳಿಕ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಮತಯಾಚನೆ ನಡೆಸಿದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಈಡೇರಿಸಿದೆ, ಈ ಚುನಾವಣೆಯಲ್ಲಿಯೂ ನೀಡಿರುವ 25 ಗ್ಯಾರಂಟಿಗಳನ್ನು ಈಡೇರಿಸುವುದು ಖಂಡಿತ. ಆದ್ದರಿಂದ ದೇಶದ ಅಭಿವೃದ್ಧಿಗೆ ನಮ್ಮೆಲ್ಲರ ಬದುಕಿನ ಏಳಿಗೆಗೆ ಕೀಳುಮಟ್ಟದ ರಾಜಕೀಯ ಮಾಡುತ್ತಿರುವ ಬಿಜೆಪಿಯನ್ನು ದೂರವಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಬಿಜೆಪಿ ಸರ್ಕಾರಗಳ ಹೊಣೆಗೇಡಿತನವನ್ನು ಟೀಕಿಸಿದರಲ್ಲದೆ, ಲೋಕಸಭೆಯಲ್ಲಿ ನಮ್ಮ ಪರ ಮಾತನಾಡುವ ಶಕ್ತಿ ಇರುವ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರಿಗೆ ಮತ ನೀಡಲು ಕೋರಿದರು.

ಕಾಂಗ್ರೆಸ್ ಮುಖಂಡ ಬಸವಪ್ರಭು ಸರನಾಡಗೌಡ ಮಾತನಾಡಿ, ತಮ್ಮ ಭಾಷಣಗಳಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡದೆ ಸೋಲಿನ ಹತಾಶೆಯಿಂದ ಬರೀ ಕೀಳುಮಟ್ಟದ ರಾಜಕಾರಣದ ಮಾತುಗಳನ್ನಾಡುತ್ತಿರುವ ಮೋದಿಜಿ ಅವರ ಬಣ್ಣ ಇಂದು ಬಯಲಾಗಿದೆ. ದೇಶದ ಉಳಿವಿಗಾಗಿ ಪ್ರಭುದ್ಧತೆಯಿಂದ ಮತಹಾಕುವ ಕೆಲಸವನ್ನು ಈ ಬಾರಿ ಮಾಡಲಿದ್ದಾರೆ ಎಂದರು.

ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸರಾವಾಜ ಸಂಶಿ, ಮುಖಂಡರಾದ ಸಂಗಣ್ಣ ಮುಧೋಳ, ಸಲಿಂಶೇಖ, ಪಾಂಡು ಪೋಲಿಸ್, ನಾಗಪ್ಪ ಗಾಣಿಗೇರ, ಬಂದೇನವಾಜ್ ಸೌದಾಗರ, ಪಕೀರಪ್ಪ ಮಾದರ, ಯಲ್ಲಪ್ಪ ಕುಳಗೇರಿ, ಅಮೀನಸಾಬ ಬೀಳಗಿ, ನಾರಾಯಣ ಹಾದಿಮನಿ, ಮಲ್ಲಪ್ಪ ಜಮಖಂಡಿ, ಓಬಳಪ್ಪ ದೊಡಮನಿ, ಹನುಮಂತ ಎಣ್ಣಿ, ವೆಂಕಣ್ಣ ಬಿಲಕೇರಿ, ಲಕ್ಷಣ ಬಿಲಕೇರಿ, ಅಮೀಪ ಗೌಡರ, ರಾಮಣ್ಣ ಪೆಟ್ಲೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net