ಘೋಡಕೆ ಓಣಿಯಲ್ಲಿ ಕೇದಾರನಾಥ ಮಾದರಿ ಗಣೇಶ

New Kedaranatha Ganesh
Published on

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಘೋಡಕೆ ಓಣಿಯಲ್ಲಿ ಅರುಣೋದಯ ಗಜಾನನೋತ್ಸವ ಸಮಿತಿ ಪ್ರತಿಷ್ಠಾಪಿಸಿರುವ ಕೇದಾರನಾಥ ದೇವಸ್ಥಾನ ಮಾದರಿಯ ಗಣೇಶ ಮೂರ್ತಿ ಜನಾಕರ್ಷಕವಾಗಿದೆ.

ಸೆ. 14ರಂದು ಬೆಳಗ್ಗೆ 7 ಗಂಟೆಗೆ ಗಜಾನನೋತ್ಸವ ಸಮಿತಿಯ ಪೆಂಡಾಲ್​ದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನಪ್ರಸಾದ, 4 ಗಂಟೆಗೆ ವಿವಿಧ ಕ್ರೀಡೆಗಳು, ಸಂಜೆ 5 ಗಂಟೆಗೆ 108 ಸಾಮೂಹಿಕ (ಮಹಿಳೆಯರಿಗೆ) ಗಣನಾಮ ಜಪ, ರಾತ್ರಿ 7 ಗಂಟೆಗೆ ಶ್ರೀ ವಿಘ್ನೇಶ್ವರನ ಆಭರಣಗಳ ಲೀಲಾವ(ಹರಾಜು) ಕಾರ್ಯಕ್ರಮ ಮತ್ತು ರಾತ್ರಿ 9 ಗಂಟೆಗೆ ಅನ್ನಪ್ರಸಾದದ ಹಮ್ಮಿಕೊಳ್ಳಲಾಗಿದೆ. ಸೆ. 15ರಂದು ಮಧ್ಯಾಹ್ನದಿಂದ ಶ್ರೀ ಗಣೇಶನ ವಿಸರ್ಜನಾ ಮೆರವಣಿಗೆಯೊಂದಿಗೆ ಗಣೇಶ ಚತುರ್ಥಿಯನ್ನು ಸಮಾಪ್ತಿಗೊಳಿಸಲಾಗುವುದು.

ಹಳೇ ಹುಬ್ಬಳ್ಳಿ ಠಾಣೆ ಪೊಲೀಸ್ ಇನಸ್ಪೆಕ್ಟರ್ ಸುರೇಶ ಯಲ್ಲೂರ ಅವರು ಅನ್ನಪ್ರಸಾದಕ್ಕೆ ಚಾಲನೆ ನೀಡುವರು. ಪೂಜೆಗೆ ಬರುವಾಗ ಪ್ರತಿ ಮನಯಿಯಿಂದ ಕಡ್ಡಾಯವಾಗಿ 21 ಮೋದಕಗಳನ್ನು ತರಬೇಕು. ಎಲ್ಲರೂ ಗಣನಾಮ ಜಪದಲ್ಲಿ ಸಾಂಪ್ರದಾಯಿ ಉಡುಪಿನಲ್ಲಿ ಬರಬೇಕು ಎಂದು ಸಮಿತಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net