ಕೆಇಬಿ ಪಿಂಚಣಿದಾರರ ಸಂಘ ಉದ್ಘಾಟನೆ

OCTOBER-2025-10-01 VV
ಮದ್ದೂರು ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ನಡೆದ ಕೆ.ಇ.ಬಿ. ಪಿಂಚಣಿದಾರರ ಸಂಘ ಹಾಗೂ ಕಚೇರಿ ಉದ್ಘಾಟನೆ ವೇಳೆ ಹಿರಿಯ ನಿವೃತ್ತ ನೌಕರರಾದ ಶಿವರಾಮು ಹಾಗೂ ಕೆಂಪಣ್ಣರವರನ್ನು ಗಣ್ಯರು ಅಭಿನಂದಿಸಿ ಗೌರವಿಸಿದರು.
Published on

ಮದ್ದೂರು: ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಕರ್ನಾಟಕ ವಿದ್ಯುತ್ ಮಂಡಳಿ ಕೆ.ಇ.ಬಿ. ಪಿಂಚಣಿದಾರರ ಸಂಘ ಹಾಗೂ ಕಚೇರಿಯನ್ನು ಸೆಸ್ಕ್ ಇಇ ಕೆ.ಎನ್.ಶಿವಕುಮಾರ್ ಉದ್ಘಾಟಿಸಿದರು.

ಮುಂದಿನ ದಿನಗಳಲ್ಲಿ ನಿವೃತ್ತಿಗೊಂಡ ನೌಕರರು ಒಂದೆಡೆ ಸೇರಿ ತಮ್ಮ ದುಃಖ ದುಮ್ಮಾನಗಳನ್ನು ಚರ್ಚೆ ನಡೆಸುವ ಜತೆಗೆ ಸಂಘಟಿತರಾಗಿ ಸರ್ಕಾರದಿಂದ ಸಿಗುವ ಹತ್ತು ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ಪಿಂಚಣಿದಾರರ ಸಂಘವಿದ್ದು ತಾಲೂಕಿನಲ್ಲಿ ಇಲ್ಲದ ಕಾರಣ ನಿವೃತ್ತಿ ನೌಕರರು ಒಂದೆಡೆ ಸೇರಿ ಸಂಘ ಮತ್ತು ಕಚೇರಿಯನ್ನು ತೆರೆದಿರುವುದು ಸಂತಸದ ವಿಚಾರವಾಗಿದೆ. ಈಗಾಗಲೇ 150ಕ್ಕೂ ಹೆಚ್ಚು ನಿವೃತ್ತ ಪಿಂಚಣದಾರರು ನೋಂದಾಯಿತರಾಗಿದ್ದು, ಒಂದೇ ಸೂರಿನಲ್ಲಿ ಚರ್ಚಿಸಿ ಹಲವು ಸಮಾಜಮುಖಿ ಸೇವಾ ಕಾರ್ಯಗಳಲ್ಲೂ ತೊಡಗಿಕೊಳ್ಳಬೇಕೆಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಸರ್ಕಾರ ನಿವೃತ್ತಿಯಾದ ನೌಕರರು ಅನಾರೋಗ್ಯಕ್ಕೆ ಒಳಗಾದವರಿಗೆ ವೈದ್ಯಕೀಯ ಸೌಲಭ್ಯ ಹಾಗೂ ಇನ್ನಿತರ ಹಲವು ಸೌಲಭ್ಯಗಳನ್ನು ಒದಗಿಸಿ ಸಂಕಷ್ಟದಲ್ಲಿರುವವವರಿಗೆ ನೆರವಾಗಿ ಸಂಘವು ಬಹು ಎತ್ತರಕ್ಕೆ ಬೆಳೆಯಲೆಂದು ಶುಭಹಾರೈಸಿದರು.

ಹಿರಿಯ ನಿವೃತ್ತ ನೌಕರರಾದ ಶಿವರಾಮು ಹಾಗೂ ಕೆಂಪಣ್ಣ ಅವರನ್ನು ಗೌರವಿಸಲಾಯಿತು. ಕೇಂದ್ರ ಸಮಿತಿ ಸದಸ್ಯ ಕೆ.ಎ.ಶಂಕರೇಗೌಡ, ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಕೇಂದ್ರ ಸಮಿತಿ ಸದಸ್ಯ ಪುಟ್ಟಸ್ವಾಮಿ, ಕಾರ್ಯಕಾರಿಣಿ ಸಮಿತಿ ಕಾರ್ಯದರ್ಶಿ ಸಿದ್ದರಾಮಯ್ಯ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net