ಅಧಿಕಾರಿಗಳು ಸಭ್ಯತೆ ಮೆರೆಯಬೇಕು: ಕೆಡಿಪಿ ಸಭೆಯಲ್ಲಿ ಸೂಚನೆ

20230701_161602
Published on

ವಿಜಯವಾಣಿ ಸುದ್ದಿಜಾಲ ಗದಗ
ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶನಿವಾರ ಗದಗ ಜಿಪಂ ಸಭಾಂಗಣದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಆಡಳಿತದ ಪಾಠ ಮಾಡಿದರು. ಅಧಿಕಾರಿಗಲ್ಲಿ ಸಭ್ಯತೆ ಬೇಕು. ದುರಾಡಳಿತ ಬೇಡ ಎಂದು ಆಡಳಿತ ವ್ಯವಸ್ಥೆಗೆ ಚುರುಕು ನೀಡುವ ಪ್ರಯತ್ನ ಜರುಗಿತು.
ಸಭೆ ಆರಂಭಕ್ಕೂ ಮುನ್ನ ಎಚ್​.ಕೆ. ಪಾಟೀಲ ಮಾತನಾಡಿ, ಮುಗ್ಧ ಜನರನ್ನು ನಾವು ಗೌರವಿಸಲು ಎಡುವುತ್ತಿದ್ದೇವೆ. ಆಡಳಿತ, ಅಧಿಕಾರದಲ್ಲಿ ಬ್ರೀಟಿಷ್​ ಆಳ್ವಿಕೆ ಮಾಡಬಾರದು. ದರ್ಪ, ಅಧಿಕಾರದ ದುರುಪಯೋಗ ಮಾಡಿಕೊಳ್ಳಬಾರದು. ನಮ್ಮಲ್ಲಿ ಪರಿವರ್ತನೆ ಆಗಬೇಕು. ರೈತ, ಸಾಮಾನ್ಯ ನಾಗರಿಕರಿಗೆ, ವೃದ್ಧ, ವಿಕಲಚೇತನರಿಗೆ ಜಿಲ್ಲಾಡಳಿತ ಭವನದಲ್ಲಿ ಗೌರವ ಸಿಗಬೇಕು. ರಾಜಕೀಯ ಮತ್ತು ಆಡಳಿತ ಸಂಸತಿ ಮೆರೆದು, ರಚನಾತ್ಮಕ ಕಾರ್ಯಗಳನ್ನು ಮಾಡಬೇಕಿದೆ ಎಂದರು. ಶೋಷಣೆ ಮಾಡುತ್ತಿರುವ ಯಾವುದೇ ಅಧಿಕಾರಿ ಆಗಲಿ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ. ಜನರಿಗೆ ಗೌರವ ನೀಡಿ ಉತ್ತಮ ಆಡಳಿತ ವ್ಯವಸ್ಥೆ ಜಾರಿ ಆಗಬೇಕು ಎಂದು ಎಚ್ಚರಿಕೆ ನೀಡಿದರು.

ಅಭಿವೃದ್ಧಿ ಸಹಕಾರ: ಸಿ.ಸಿ. ಪಾಟೀಲ
ನಾವು ರಾಜಕೀಯ ವಿರೋಧಿಗಳು, ಆದರೆ, ಅಭಿವೃದ್ಧಿ ವಿರೋದಿಗಳಲ್ಲ ಎಂದು ವೇದಿಕೆ ಮೇಲೆ ಮಾಚಿ ಸಚಿವ, ಶಾಸಕ ಸಿ.ಸಿ. ಪಾಟೀಲ ಅವರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಚುನಾವಣೆ ಸಂದರ್ಭದಲ್ಲಿ ಲಕ್ಷ$್ಮಣ ರೇಖೆ ದಾಟಿ ಪ್ರಚಾರ, ವಾಕ್ಸಮರ ಮಾಡಿರುತ್ತೇವೆ. ಚುನಾವಣೆ ನಂತರ ಅಭಿವೃದ್ಧಿ ಪೂರಕವಾಗಿ ಪಕ್ಷಬೇದ ಮರೆತು ಒಂದಾಗಬೇಕು. ಬರಗಾಲ ಛಾಯೆ ಮುನ್ಸೂಚನೆ ಕಾಣುತ್ತಿದೆ. ಬರಗಾಲ ನಿಭಾಯಿಸಲು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನಿಡುತ್ತೇವೆ ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ, ವಿಂಡ್​ ಮಿಲ್​ ಗಳ ಬಗ್ಗೆ ಸಚಿವ ಎಚ್​.ಕೆ. ಪಾಟೀಲ ಅವರು ನಿಯಂತ್ರಣ ಹೇರಬೇಕು ಎಂದು ಸಿ.ಸಿ. ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net