

ಅಧಿಕಾರಿಗಳ ಕಾರ್ಯಕ್ಷಮತೆ: ಬೇಸರ ವ್ಯಕ್ತಪಡಿಸಿದ ಜನಪ್ರತಿನಿದಿಗಳು
ವಿಜಯವಾಣಿ ಸುದ್ದಿಜಾಲ ಗದಗ
ಜಲ ಜೀವನ್ ಮಿಷನ್, ಸಬ್ಸಿಡಿ ರೂಪದಲ್ಲಿ ಕೃಷಿ ಯಂತ್ರೋಪಕರಣ ವಿತರಣೆ, ಗ್ರಾಮೀಣ ಭಾಗಕ್ಕೆ ಸ್ಮಶಾನ ಭೂಮಿ ಇಲ್ಲದಿರುವುದು, ನಗರ ನೀರು ಸರಬರಾಜು ಇಲಾಖೆಯಿಂದ ಗುತ್ತಿಗೆದಾರನಿಗೆ ಅಧಿಕ ಪಾವತಿ, ನಾನಾ ಕಾರಣಗಳಿಂದ ಖಾಸಗಿ ಕೃಷಿ ಭೂಮಿಯಲ್ಲಿ "ಸರ್ಕಾರ' ಎಂದು ನಮೂದು, ರೋಣ ವಿಧಾನಸಭಾ ಕ್ಷೇತ್ರದಲ್ಲಿ ನೀರು ಪೂರೈಕೆ ಮತ್ತು ನಿರ್ವಹಣೆ ಹಾಗೂ ಕರ್ನಾಟಕ ನೀರಾವರಿ ನಿಗಮದ ಯಂತ್ರೋಪಕರಣ ಕಳ್ಳತನ ಪ್ರಕರಣಗಳು ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜರುಗಿದ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದವು.
ಸಭೆ ಆರಂಭದಲ್ಲಿ ಸರ್ಕಾರಿ ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಸಚಿವ ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ಜಿ.ಎಸ್. ಪಾಟೀಲ ಸೇರಿದಂತೆ ಜನಪ್ರತಿನಿಧಿಗಳು ತೀವ್ರ ಬೇಸರ ವ್ಯಕ್ತಪಡಿಸಿದ ಪ್ರಸಂಗಗಳು ಜರುಗಿದವು. ನೀರಾವರಿ ನಿಗಮದ ಬಹು ಮೌಲ್ಯದ ಯಂತ್ರೋಪಕರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸ್ವತ್ತನ್ನು ರಸುವ ಮತ್ತು ಸೂಕ್ತ ನಿರ್ವಹಣೆ ಜವಾಬ್ದಾರಿ ಸ್ಥಳಿಯ ಅಧಿಕಾರಿಗಳದ್ದೇ ಆಗಿರುತ್ತದೆ. ಸರ್ಕಾರಿ ವಸ್ತುಗಳು ಕಳ್ಳತನ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಯಿತು.
ಜವಾಬ್ದಾರಿ ಯಾರದ್ದು:
ಸಭೆ ಆರಂಭವಾಗುತ್ತಿದ್ದಂತೆ, ರೋಣ ವಿಧಾನಸಭೆ ಕ್ಷೇತ್ರದ ಗಜೇಂದ್ರಗಡ, ರೋಣ, ನರೇಗಲ್ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಬಗ್ಗೆ ಚರ್ಚೆ ಜರುಗಿ, ನೀರು ಪೂರೈಕೆ ಕಾಮಗಾರಿ ಸ್ಥಳಿಯ ಸಂಸ್ಥೆಗಳಿಗೆ ಹಸ್ತಾಂತರ ಪ್ರಕ್ರಿಯೆ ಕುರಿತು ಗೊಂದಲ ಸೃಷ್ಟಿ ಆಯಿತು. ಕಾಮಗಾರಿಯನ್ನು ಹಸ್ತಾಂತರ ಮಾಡಿದ್ದೇವೆ ಎಂದು ನೀರು ಸರಬರಾಜು ಇಲಾಖೆ ಸ್ಪಷ್ಟಣೆ ನೀಡಿದರೆ, ಕಾಮಗಾರಿಯನ್ನು ಹಸ್ತಾಂತರ ಪಡೆದಿಲ್ಲ ಎಂದು ಸ್ಥಳಿಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಪ್ರತಿಕ್ರಿಯಿಸಿದ್ದರಿಂದ ಗೊಂದಲ ಏರ್ಪಟ್ಟಿತು. ನಿರ್ವಹಣೆ, ಖರ್ಚುವೆಚ್ಚ, ವೇತನ, ನಿರ್ವಹಣೆ ವೆಚ್ಚ ಭರಿಸಬೇಕಾದ ಸಕ್ಷಮ ಪ್ರಾಧಿಕಾರ ಯಾರು ಎಂಬುದರ ಬಗ್ಗೆ ಸುದೀರ್ ಚರ್ಚೆ ಜರುಗಿತು. ಗುತ್ತಿಗೆದಾರನಿಗೆ ಯಾವುದೇ ರೀತಿಯ ಹಣ ಪಾವತಿಸಿದಂತೆ ಇಲಾಖೆಗೆ ಮತ್ತು ಸ್ಥಳಿಯ ಸಂಸ್ಥೆಗೆ ಎಚ್.ಕೆ. ಪಾಟೀಲ ಸೂಚಿಸಿದರು. ಈ ಬಗ್ಗೆ ಡಿಸಿ ನೇತೃತ್ವದಲ್ಲಿ ಸಭೆ ಜರುಗಿಸಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು. ಹೊಸ ಗುತ್ತಿಗೆ ಕರೆದು ನಿರ್ವಹಣೆ ಜವಾಬ್ದಾರಿ ನೀಡುವಂತೆ ಸೂಚಿಸಿದರು.
ಕೃಷಿ ಇಲಾಖೆ ಅಧಿಕಾರಿಗಳಿಗೆ ತರಾಟೆ:
ಗುಣಮಟ್ಟದ ಗೊಬ್ಬರ ಪೂರೈಕೆ ಕುರಿತು ರೈತರು ಅಸಮಧಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕ ಸಿ.ಸಿ. ಪಾಟೀಲ, ಗೊಬ್ಬರ ಪೂರೈಕೆ ಏಜ್ಸಿಯವರು ರೈತರಿಗೆ ದಿಕ್ಕು ತಪ್ಪಿಸುವ ಅವಕಾಶ ಇರುತ್ತದೆ. ರೈತರಿಗೆ ವಿತರಣೆ ಮಾಡುವ ಮೊದಲ ಗೊಬ್ಬರವನ್ನು ಪರೀಕ್ಷೆ ಮಾಡಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರೋಣದಲ್ಲಿ 1.50 ಕೋಟಿ ವೆಚ್ಚದಲ್ಲಿ ಬೀಜ ಸಂಸ್ಕರಣ ಟಕ ನಿರ್ಮಾಣವಾಗಿ ಎರಡೂ ವರ್ಚ ಕಳೆದರೂ ಬಳಕೆ ಮಾಡಲು ಕೃಷಿ ಇಲಾಖೆ ವಿಲವಾಗಿರುವ ಬಗ್ಗೆ ಜಿ.ಎಸ್. ಪಾಟೀಲ ಖಾರವಾಗಿ ಪ್ರತಿಕ್ರಿಯಿಸಿದರು. ಸೀಡ್ ಕಾಪೋರ್ರೇಷನ್ ಅಧಿಕಾರಿ ಮಾತನಾಡಿ, ಬೀಜ ಸಂಸ್ಕರಣ ಕಟ್ಟಡಕ್ಕೆ ರಸ್ತೆ, ಕಂಪೌಂಡ ಇಲ್ಲ ಎಂದು ಉತ್ತರ ನೀಡಿದ್ದಕ್ಕೆ ಸಿಟ್ಟಾದ ಎಚ್.ಕೆ. ಪಾಟೀಲ ಮತ್ತು ಜಿ.ಎಸ್. ಪಾಟೀಲ ರಸ್ತೆ, ಕಂಪೌಂಡ್ ಇಲ್ಲದಿದ್ದರೆ ಕಟ್ಟಡ ಬಳಸುವಂತಿಲ್ಲವೇ ಎಂದು ಪ್ರಶ್ನಿಸಿದರು. ಸಮಿತಿಯೊಂದನ್ನು ರಚಿಸಿ ಗೋಡೌನ್ ಬಳಕೆ ಆಗದ ಬಗ್ಗೆ ವರದಿ ನೀಡುವಂತೆ ಜಿಪಂ ಸಿಇಓ ಅವರಿಗೆ ಸೂಚಿಸಲಾಯಿತು.
ಹಣ ಪಾವತಿ ಬಗ್ಗೆ ಅನುಮಾನ:
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಹಲವು ರೈತರು ಸಬ್ಸಿಡಿ ರೂಪದಲ್ಲಿ ಕೃಷಿ ಯಂತ್ರೋಪಕರಣ ಪಡೆಯಲು 10 ಸಾವಿರದಿಂದ 60 ಸಾವಿರ ವರೆಗೆ ಮುಂಗಡ ಪಾವತಿ ಮಾಡಿ ವರ್ಷವೇ ಕಳೆದರೂ ಇನ್ನೂ ಕೃಷಿ ಇಲಾಖೆಯಿಂದ ಯಂತ್ರೋಪಕರಣ ವಿತರಣೆ ಆಗಿಲ್ಲ. ಇದಕ್ಕೆ ಸೂಕ್ತ ಕ್ರಿಯಾ ಯೋಜನೆ ಇದೆಯೇ ಎಂದು. ರೈತರಿಂದ ಮೊದಲೇ ಇಷ್ಟೊಂದು ಹಣ ಕಟ್ಟಿಸಿಕೊಂಡಿದ್ದಾದರು ಏತಕ್ಕೆ ಎಂದು ಚಂದ್ರು ಲಮಾಣಿ ಕೃಷಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಎಚ್.ಕೆ. ಪಾಟೀಲ, ಅಷ್ಟೊಂದು ಹಣ ರೈತರೇ ಕಟ್ಟಿದ್ದಾರೆಯೇ ಅಥವಾ ಕಂಪನಿಯವರೇ ಇತರ ಮೂಲದಿಂದ ಹಣ ಪಾವತಿ ಮಾಡಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಜಿಪಂ ಸಿಇಒ ಈ ಬಗ್ಗೆ ಮೇಲ್ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು ಎಂದರು.
1043 ಕೋಟಿ ಮೊತ್ತದ ಜಲಜೀವನ್ ಮಿಷನ್ ವ್ಯರ್ಥ:
ಜಲಜೀವನ ಮಿಷನ್ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ದಿನ 55 ಲೀಟರ್ ನೀರು ಪೂರೈಕೆ ಮಾಡುವ ಜಲಜೀವನ ಮೀಷನ್ ಯೋಜನೆ ಕುರಿತು ನಡೆದ ಚರ್ಚೆಯಲ್ಲಿ ಯಾವ ಗ್ರಾಮಕ್ಕೆ ಪ್ರತಿದಿನ ಎಷ್ಟು ಕುಡಿಯುವ ನೀರಿನ ಅವಶ್ಯಕತೆ ಇದೆ ಎಂಬ ಮಾಹಿತಿ ಇಲಾಖಾ ಅಧಿಕಾರಿಗಳ ಬಳಿ ಇಲ್ಲದಕ್ಕೆ ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಜನಪ್ರತಿನಿಧಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಟ್ಯಾಪಿಂಟ್, ಮೀಟರ್, ನೀರು ಪೂರೈಕೆ ಬಗ್ಗೆ ಸೂಕ್ತ ಮಾಹಿತಿ ಕೊರತೆಯಿಂದಾಗಿ ಅಧಿಕ ನೀರು ಪೂರೈಕೆ ನಿರ್ವಹಣೆಗೆ ವ್ಯತಾ ಹಣ ಕರ್ಚು ಮಾಡುತ್ತಿರಾ? ಎಂದು ಸಚಿವರು ಪ್ರಶ್ನಿಸಿದರು. ನಿರ್ವಹಣೆ, ಎಲೆಕ್ಟ್ರಿಕಲ್ ಚಾರ್ಜ, ನೀರು ಸಂಸ್ಕರಣ ಕ್ಕಾಗಿ ಪ್ರತಿ ವರ್ಷ 15 ಕೋಟಿ ವಾಷಿರ್ಕ ರ್ಖಚಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯ ಭಾಗಶಃ ಗ್ರಾಮಗಳಿಗೆ ಕನಿಷ್ಠ ನೀರು ಪೂರೈಕೆ ಆಗುವುದಿಲ್ಲ. ಗ್ರಾಮಸ್ಥರು ಕೊಳವೆ ಬಾವಿ ನೀರನ್ನೇ ಅವಲಂಭಿಸಿದ್ದಾರೆ ಎಂದು ಸಿ.ಸಿ. ಪಾಟೀಲ ತಿಳಿಸಿದರು. ಜಲಜೀವನ ಮಿಷನ್ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಇಲಾಖೆಯಿಂದ ಯಾವುದೇ ಬಿಲ್ ಪಾವತಿ ಮಾಡದಂತೆ ಸಚಿವರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಪಿಆರ್ ಸಿದ್ಧಪಡಿಸಿ:
ಲೆ$್ಮಶ್ವರ ತಾಲೂಕಿನ ಹಮ್ಮಗಿ, ಗುಮ್ಮಗೋಳ ಗ್ರಾಮದ ಹಿನ್ನಿರಿನ ಮೂಲಕ ಲೆ$್ಮಶ್ವರ ನಗರಕ್ಕೆ ನೀರು ಪೂರೈಸಲು ಡಿಪಿಆರ್ ಸಿದ್ದಗೊಳಲಿಸಲು ಸಚಿವರು ಸೂಚಿಸಿದರು. ನಗರ ನೀರು ಸರಬರಾಜು ಇಲಾಖೆಯಿಂದ ಡಿಪಿಆರ್ಗೆ ಹಣ ವಿನಿಯೋಗಿಸಲು ಸೂಚಿಸಲಾಯಿತು.
ಸ್ಮಶಾನ ಭೂಮಿ:
ಹಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವುದೇ ಆಶ್ಚರ್ಯ ತಂದಿದೆ. ಡಿಸಿ, ಎಸಿ, ತಹಸೀಲ್ದಾರ ನೇತೃತ್ವದಲ್ಲಿ ನ.1ರ ಒಳಗಾಗಿ ಜಾಗೆ ಅಂತಿಮ ಗೊಳಿಸಬೇಕು. ಸರ್ಕಾರದಿಂದ ಭೂ ಖರೀದಿಗೆ ಹಣ ತರುವ ಜವಾಬ್ದಾರಿ ನಮ್ಮದಾಗಿರುತ್ತದೆ. ಡಿಸೆಂಬರ್ 31 ರ ಒಳಗಾಗಿ ಜಿಲ್ಲೆಯಲ್ಲಿ ಎಲ್ಲ ಗ್ರಾಮಗಳಿಗೆ ಸ್ಮಶಾನ ಭೂಮಿ ಹೊಂದುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಯಿತು.
ಕಳ್ಳತನ ಪ್ರಕರಣ:
ನರಗುಂದ ತಾಲೂಕಿನ ವಿವಿದೆಡೆ ಕರ್ನಾಟಕ ನೀರಾವರಿ ನಿಗಮದ ಟ್ರಾನ್ಸಫಾರ್ಮರ್, ಇತರೆ ಯಂತ್ರೋಪಕರಣಗಳನ್ನು ಹಾಡು ಹಗಲೇ ನುರಿತ ಕಳ್ಳರೇ ಕಳತನ ಮಾಡಿದ ಪ್ರಕರಣವನ್ನು ಸಚಿವ ಸಿ.ಸಿ. ಪಾಟೀಲ ಸಭೆಯಲ್ಲಿ ಬಹಿರಂಗಗೊಳಿಸಿದರು. ಪ್ರತಿ ಯಂತ್ರೋಪಕರಣದ ಬೆಲೆ 25 ಲಕ್ಷ ರೂ. ಇದೆ. ಆದರೂ, ಇಲಾಖೆ ಯಾವ ಕ್ರಮ ಕೈಗೊಂಡಿದೆ. ಕಳ್ಳತನಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಸರ್ಕಾರಿ ಸ್ವತ್ತು ಕಳ್ಳತನ ಕುರಿತು ಮಾಃಇತಿ ನಿಡಿದ ಪೊಲೀಸ್ ಇಲಾಖೆ ಕಳ್ಳರನ್ನು ಬಂಧಿಸಿದ್ದಾಗಿ ಮತ್ತು 3 ಲಕ್ಷ ರೂ. ವಶ ಪಡಿಸಿಕೊಂಡಿದ್ದಾಗಿ ತಿಳಿಸಿದರು. ಇದ್ಕಕೆ ಬೇಸರ ವ್ಯಕ್ತ ಪಡಿಸಿದ ಸಚಿವರು 25 ಲಕ್ಷ ಮೌಲ್ಯದ ವಸ್ತುವಿಗೆ 3 ಲಕ್ಷ ರೂ. ರಿಕವರಿ ಅಂದರೆ ಹೇಗೆ? ಇದಕ್ಕೆ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಸೂಚಿಸಿದರು.
ಹೈಲೆಟ್ಸ್:
ಕೋಟ್:
ನರಗುಂದ ತಾಲೂಕಿನಲ್ಲಿ ಕಳ್ಳರು ಹೆಸ್ಕಾಂ ವೇಷ ಧರಿಸಿ ಹಾಡು ಹಗಲೇ ಕಳ್ಳತನ ಮಾಡಿದ್ದಾರೆ. ಅವರು ಕಳ್ಳತನ ಮಾಡುವಾಗ ವಿದ್ಯುತ್ ಇರಲಿಲ್ಲ. ಸೆಕ್ಯೂರಿಟಿ ಗಾರ್ಡ ಇರಲಿಲ್ಲ. ಎಲ್ಲವನ್ನು ತಿಳಿದವರೇ ಈ ಕಳ್ಳತನ ಮಾಡಿದ್ದಾರೆ. ಹೊಸ ಯಂತ್ರೋಪಕರಣಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು.
ಸಿ.ಸಿ. ಪಾಟೀಲ, ಶಾಸಕ
ಕೋಟ್:
ಪಿಯುಸಿ ಲಿತಾಂಶದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿ ಕೊನೆಯ ಸ್ಥಾನ ಪಡೆದಿದೆ. ಶೈಕ್ಷಣಿಕ ಇಲಾಖೆ, ಶಿಕ್ಷಕರ ಗುಣಮಟ್ಟ ಸುಧಾರಣೆಗೆ ವಿಶೇಷ ಕಾರ್ಯಾಗಾರ ಜತೆಗೆ ಇಲಾಖೆ ಸಭೆ ಜರುಗಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಎಸ್.ವಿ. ಸಂಕನುರು, ವಿಧಾನ ಪರಿಷತ್ ಶಾಸಕ
ಕೋಟ್:
ರೋಣ ವಿಧಾನಸಭಾ ಕ್ಷೇತ್ರದ ನಗರ ನೀರು ಸರಬರಾಜು ವ್ಯವಸ್ಥೆ ತೀವ್ರ ಹದಗೆಟ್ಟಿದೆ. ಈ ಬಗ್ಗೆ ಅಧಿಕಾರಿಗಳೇ ಹೊಣೆ ಆಗಿಸಿದ್ದೇವೆ. ಹೊಸ ಗುತ್ತೊಗೆದಾರರನ್ನು ನೇಮಿಸಿ ಸೂಕ್ತ ನಿರ್ವಹಣೆಗೆ ಸೂಚಿಸಲಾಗಿದೆ.
ಜಿ.ಎಸ್. ಪಾಟೀಲ, ಶಾಸಕ, ರೋಣ