ಕೆಡಿಪಿ ಸಭೆ ನಡೆಸಲು ಶಾಸಕ ಪೂಂಜ ನಿರಾಸಕ್ತಿ: ಪ್ರತಿಭಟನಾ ಸಭೆಯಲ್ಲಿ ಬೆಳ್ತಂಗಡಿ ಯುವ ಕಾಂಗ್ರೆಸ್ ಆರೋಪ

New Project (9)
Published on

ಬೆಳ್ತಂಗಡಿ: ಸರ್ಕಾರ ಬಂದು ಎರಡು ವರ್ಷ ಆದರೂ, ತಾಲೂಕಿನ ಅಭಿವೃದ್ಧಿ ಬಗ್ಗೆ ಮಾತನಾಡಬೇಕಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲು ಶಾಸಕ ಹರೀಶ್ ಪೂಂಜ ಆಸಕ್ತಿ ತೋರಿಸುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಎದುರು ಸೋಮವಾರ ಕೆಡಿಪಿ ಸದಸ್ಯರು ಮತ್ತು ಬೆಳ್ತಂಗಡಿ ಯುವ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವಂತಹ ಜಿಲ್ಲಾ ಕೆಡಿಪಿಯಲ್ಲಿ ಸಕ್ರಿಯವಾಗಿ ಜಿಲ್ಲೆಯ ವಿಚಾರವನ್ನು ಮಾತನಾಡಲಾಗುತ್ತಿದೆ ಮತ್ತು ಉಸ್ತುವಾರಿ ಸಚಿವರು ಅದರ ಬಗ್ಗೆ ಗಮನವನ್ನು ವಹಿಸುತ್ತಿದ್ದಾರೆ. ಈ ಸಭೆಗೆ ಸಾಕಷ್ಟು ಬಾರಿ ಶಾಸಕರು ಹಾಜರಾಗಿ ಕೆಡಿಪಿ ಸಭೆಗೆ ಬಹಿಷ್ಕಾರ ಹಾಕಿ ಹೊರ ನಡೆಯುತ್ತಾರೆ. ಬೆಳ್ತಂಗಡಿಯಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ, ಯಾವುದೇ ಅನುದಾನ ಬರುತ್ತಿಲ್ಲ ಎಂದು ಆರೋಪಿಸಿ ಕೆಡಿಪಿ ಸಭೆ ಮಾಡಲು ಶಾಸಕರು ಇನ್ನೂ ಮನಸ್ಸು ಮಾಡುತ್ತಿಲ್ಲ. ಈಗಾಗಲೇ ಸರ್ಕಾರ ಐದು ಜನ ನಾಮನಿರ್ದೆಶಿತ ಸದಸ್ಯರನ್ನು ನೇಮಕ ಮಾಡಿ ಎರಡು ವರ್ಷವಾದರೂ ಕೂಡ ಒಂದೇ ಒಂದು ಕೆಡಿಪಿ ಸಭೆ ಮಾಡದೆ ಬೆಳ್ತಂಗಡಿಯ ಅಭಿವೃದ್ಧಿಯನ್ನು ಶಾಸಕರು ಕುಂಠಿತಗೊಳಿಸಿದ್ದಾರೆಂದು ಆರೋಪಿಸಿದರು.

ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ತಾಲೂಕು ಕೆಡಿಪಿ ಸದಸ್ಯರಾದ ಸುನೀಲ್ ಕುಮಾರ್ ಜೈನ್ ಶಿರ್ಲಾಲು, ಮೆಲ್ವಿನ್ ಸಿಕ್ವೇರಾ, ಸುಮತಿ ಶೆಟ್ಟಿ ಕಣಿಯೂರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿತೇಶ್, ಉಮೇರ ಬಾನು, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುನೀಲ್ ಡೇಸಾ, ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹಕೀಮ್ ಕೊಕ್ಕಡ, ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಅಝರ್ ನಾವೂರು, ಯುವ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಅರುಣ್ ಲೋಬೊ, ನವೀನ್ ಗೌಡ ಸವಣಾಲು, ದೀಪಕ್ ಕೋಟ್ಯಾನ್, ಅವಿನಾಶ್ ಕುರ್ತೋಡಿ, ರಾವೇಂದ್ರ ಪೂಜಾರಿ, ಗಣೇಶ್ ಕಾಣಿಯೂರು, ಪ್ರಜ್ವಲ್ ಜೈನ್, ಯತೀಶ್ ಧರ್ಮಸ್ಥಳ, ಅಭಿದೇವ್ ಆರಿಗ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net