ಸಿ.ಎ.ಮಮತಾ ಅವಿರೋಧ ಆಯ್ಕೆ

18spt1
Published on
  • ಸೋಮವಾರಪೇಟೆ :ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಚನ್ನಾಪುರ ಗ್ರಾಮದ ಸಿ.ಎ.ಮಮತಾ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಎಸ್.ಪರಮೇಶ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣಾಧಿಕಾರಿ ಪಿ.ಬಿ.ಮೋಹನ್ ಅವರಿಗೆ ಮಮತಾ ಒಬ್ಬರೇ ನಾಮಪತ್ರ ಸಲ್ಲಿಸಿದರು.
    ಈ ಹಿನ್ನೆಲೆಯಲ್ಲಿ ಅವಿರೋಧ ಅಯ್ಕೆಯನ್ನು ಘೋಷಿಸಲಾಯಿತು. ಸಂಘದ ಪ್ರಥಮ ಮಹಿಳಾ ಉಪಾಧ್ಯಕ್ಷೆಯಾಗಿರುವುದು ವಿಶೇಷ. ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಮಮತಾ, ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.
    ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಆಡಳಿತ ಮಂಡಳಿ ಸದಸ್ಯರಾದ ಎಸ್.ಬಿ.ಭರತ್‌ಕುಮಾರ್, ಜಿ.ಪಿ.ಸುನೀಲ್, ವಿ.ಎನ್.ನಾಗರಾಜು, ಕೆ.ಜಿ.ದಿನೇಶ್, ಸಿ.ಈ.ವೆಂಕಟೇಶ್, ಜಿ.ಈ.ಸುರೇಶ್, ಪುಷ್ಪಾ ಸುರೇಶ್, ಸುಮಿತ್ರಾ ಮಹೇಶ್, ವಾಣಿ ಶಿವಕುಮಾರ್, ಸಿಇಒ ಕಿರಣ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net