

ಕುಶಾಲನಗರ : ಸೇವಾ ನಿವೃತ್ತಿ ಹೊಂದಿದ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಹಿರಿಯ ಶ್ರೇಣಿ ಉಪನ್ಯಾಸಕ ಬಿ.ಸಿ.ಚಿನ್ನೇಗೌಡ ಅವರಿಗೆ ಶಿಕ್ಷಣ ಇಲಾಖೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಯಟ್ ಪ್ರಾಂಶುಪಾಲ ಎಂ.ಚಂದ್ರಕಾಂತ್, 30 ವರ್ಷ ಸೇವೆ ಸಲ್ಲಿಸಿರುವ ಚಿನ್ನೇಗೌಡ ವಿದ್ಯಾರ್ಥಿ ವೃಂದ ಹಾಗೂ ಸಿಬ್ಬಂದಿ ಪ್ರೀತಿಗೆ ಪಾತ್ರರಾಗಿದ್ದಾರೆ. ಸಂಸ್ಥೆಯ ಏಳಿಗೆ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಸಾಥ್ ನೀಡಿದ್ದಾರೆ. ಸದಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಚಿನ್ನೇಗೌಡರ ನಿವೃತ್ತಿ ಜೀವನ ಶೈಕ್ಷಣಿಕ ಹಾಗೂ ಸಮಾಜಮುಖಿ ಕೆಲಸಗಳಿಗೆ ಸದ್ಬಳಕೆಯಾಗಲಿ ಎಂದರು.