

ನಾಪೋಕ್ಲು: ಕಾವೇರಿಯ ಎರಡನೇ ಪುಣ್ಯಕ್ಷೇತ್ರ ಬಲಮುರಿಯಲ್ಲಿ ಭಕ್ತಿ ಗೀತೆ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು .
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ, ಶ್ರೀ ಅಗಸ್ತ್ಯ ದೇವಸ್ಥಾನ ಸಮಿತಿ, ಬಲಮುರಿ ಮಹಾದೇವ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಪೋಕ್ಲುವಿನ ರವಿ ಓಂಕಾರ ಮ್ಯೂಸಿಕ್ ತಂಡ ಹಾಗೂ ಸ್ಥಳೀಯ ಕಲಾವಿದರಾದ ಗುಡ್ಡೆರ ತೇಜು ಮೇಡತನ ರಶ್ಮಿ, ಕೋಳಿಮಾಡು ಪ್ರಶಾಂತ ಅವರ ಕಂಠಸಿರಿಯಲ್ಲಿ ಭಕ್ತಿ ಗೀತೆ ಗಾಯನ ಜನ ಮನ ರಂಜಿಸಿತು. ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕೊಂಗಿರಂಡ ಸಾಧು ತಮ್ಮಯ್ಯ, ಅನ್ನದಾನ ಸಮಿತಿ ಅಧ್ಯಕ್ಷ ವಿಜಯ್ ಚೆಟ್ಟಿಚ್ಚ, ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೆಬ್ಬಾಟಂಡ ಪೆಮ್ಮಯ್ಯ, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ತೊತ್ತಿಯಂಡ ಬನ್ನಿ ಚಿಣ್ಣಪ್ಪ, ಉಪಾಧ್ಯಕ್ಷ ಗುಡ್ಡೇರ ಲಕ್ಸು, ಹೋಬಳಿ ಕಸಾಪ ಅಧ್ಯಕ್ಷ ನೆರವಂಡ ಉಮೇಶ, ಮುಖಂಡರಾದ ಬೊಳ್ಳಚೆಟ್ಟಿರ ಪ್ರಕಾಶ ಕಾಳಪ್ಪ ಕುಸುಮಾ, ಹರಿಣಿ ವಿಜಯ್ ಇತರರು ಇದ್ದರು. ಸನ್ಮಾನ: ಈಜುತಜ್ಞ, ಸಾಹಸಿ ಎಂ.ಆರ್. ಬಿಪಿನ್ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.