ಭೂಮಿ, ಭಾಷೆ ಉಳಿಸಲು ಮುಂದಾಗಿ

05 gkp 01
Published on

ಗೋಣಿಕೊಪ್ಪ : ಭೂಮಿ ಮತ್ತು ಭಾಷೆ ಉಳಿಸಲು ಮುಂದಾಗಿ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ ಬೆಳ್ಯಪ್ಪ ಹೇಳಿದರು. ಪೊನ್ನಂಪೇಟೆ ತಾಲೂಕು ಬೇಗೂರಿನ ಪಟ್ಟಕೇರಿ ಅಂಬಲ ಸಂಘಟನೆಯ 8ನೇ ವರ್ಷದ ಬೇಲ್ ನಮ್ಮೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಕೊಡವ ಜನಾಂಗವೂ ಈ ಮಣ್ಣಿನ ಮೂಲದಿಂದಲೇ ಬೆಳೆದು ಬಂದಿದೆ. ಭೂಮಿಯೇ ನಮ್ಮ ಎಲ್ಲಾ ಸಂಸ್ಕೃತಿ ಮತ್ತು ಬದುಕಿನ ಮೂಲ. ಹಾಗೇ ಒಂದು ಸಮುದಾಯದ ಹೆಗ್ಗುರುತಾಗಿ ಭಾಷೆ ಇದೆ. ಈ ನಿಟ್ಟಿನಲ್ಲಿ ಕೊಡವಾಮೆ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net