ಮಗನಿಂದಲೇ ತಂದೆಯ ಹತ್ಯೆ

Crime Logo
Published on

ಜಗಳದ ಪರಿಣಾಮ ಕೊಲೆ
ಗೋಣಿಕೊಪ್ಪ: ಸಮೀಪದ ಚಿಕ್ಕಮಂಡೂರು ಗ್ರಾಮದಲ್ಲಿ ಮಗನಿಂದಲೇ ತಂದೆ ಹತ್ಯೆಯಾದ ಘಟನೆ ನಡೆದಿದೆ. ಸಿ.ಎನ್ ನಾಣಯ್ಯ (70) ಮೃತರು.
ಗುರುವಾರ ರಾತ್ರಿ 11.45ರ ವೇಳೆಯಲ್ಲಿ ಅಪ್ಪ- ಮಗನ ನಡುವೆ ಜಗಳ ನಡೆದಿದೆ. ಮಗ ಸಿ. ದೀಪು ಕೋಪದ ಭರದಲ್ಲಿ ದೊಣ್ಣೆಯಿಂದ ಹೊಡೆದ ಪರಿಣಾಮ ನಾಣಯ್ಯ ಮೃತರಾಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿ ದೀಪು ಸೆರೆಗೆ ಬಲೆ ಬೀಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net