ವಿರಾಜಪೇಟೆ : ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ಶುಕ್ರವಾರ ರಾತ್ರಿ ಹನ್ನೊಂದರ ಸಮಯದಲ್ಲಿ ಗೋಣಿಕೊಪ್ಪಲು ಕಡೆಗೆ ಸಂಚರಿಸುತ್ತಿದ್ದ ಕಾರು ಗೋಣಿಕೊಪ್ಪಲು ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗೋಣಿಕೊಪ್ಪಲು ಕಡೆಯಿಂದ ಬರುತ್ತಿದ್ದ ಇನ್ನೆರಡು ಪಿಕ್ ಅಪ್ ವಾಹನಗಳು ಸರಣಿ ಅಪಘಾತಕ್ಕೆ ಒಳಗಾಗಿದೆ. ಅಪಘಾತದ ರಬಸಕ್ಕೆ ಪಿಕ್ ಅಪ್ ಮಗುಚಿದ್ದು ನಾಲ್ಕು ವಾಹನಗಳು ಭಾಗಶಃ ನಜ್ಜುಗುಜ್ಜಾಗಿವೆ. ಮಂಜು ಕವಿದ ವಾತಾವರಣ ಹಾಗೂ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣವೆಂದು ತಿಳಿದು ಬಂದಿದೆ. ಪಿಕ್ ಅಪ್ ವಾಹನಗಳಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು. ಚಾಲಕರು ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತಿದ್ದಾರೆ.