ದಂತ ಮಹಾವಿದ್ಯಾಲಯಕ್ಕೆ ಜರ್ಮನ್ ಪ್ರತಿನಿಧಿಗಳ ಭೇಟಿ

Oplus_131072
Oplus_131072
Published on

ವಿರಾಜಪೇಟೆ : ವೀರಾಜಪೇಟೆಯ ಮಗ್ಗುಲ ಗ್ರಾಮದಲ್ಲಿರುವ ಕೊಡಗು ದಂತ ಮಹಾ ವಿದ್ಯಾಲಯಕ್ಕೆ ಹ್ಯಾನೋವರ್‌ನ ಇಂಟರ್‌ನ್ಯಾಷನಲ್ ಆರ್ಥೋಡಾಂಟಿಕ್ ಸೊಸೈಟಿ ಉಪಾಧ್ಯಕ್ಷ ಪ್ರೊ. ಜಾನ್ ವಿ. ರೈಮನ್ ಮತ್ತು ಮ್ಯಾಕ್ಸಿಲೊ ಫೇಶಿಯಲ್ ಸರ್ಜನ್, ಸಂಶೋಧಕ ಪ್ರೊ. ಅಲಾದಿನ್ ಸಬಾಗ್ ಭೇಟಿ ನೀಡಿದ್ದರು.
ಕೊಡಗು ದಂತ ಮಹಾವಿದ್ಯಾಲಯದ (ಕೂರ್ಗ್ ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್) 25ನೇ ವರ್ಷದ ಸಂಭ್ರಮಾಚರಣೆಯ ನೆನಪಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಉಪನ್ಯಾಸ ಸರಣಿ ಭಾಗವಾಗಿ ಕಾಲೇಜು ಮತ್ತು ಇಂಟರ್ ನ್ಯಾಷನಲ್ ಆರ್ಥೋಡಾಂಟಿಕ್ ಸೊಸೈಟಿ ವೈಜ್ಞಾನಿಕ ಮತ್ತು ಬೋಧನಾ ವಿನಿಮಯ ಒಪ್ಪಂದದ ಅಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಕಲಿಕೆಯ ಪ್ರಮಾಣವನ್ನು ಬೆಂಬಲಿಸಲು ಅತಿಥಿಗಳು ವಿವರವಾದ ಪಾಠ ಯೋಜನೆಗಳನ್ನು ಇದೇ ಸಂದರ್ಭ ವಿತರಿಸಿದರು. ಕಾಲೇಜು ಮತ್ತು ಆರ್ಥೋಡಾಂಟಿಕ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿರುವ ಹಲವು ಯೋಜನೆಗಳಿಗೆ ಚಾಲನೆ ನೀಡಲಾಯಿತು. ಕೂರ್ಗ್ ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ಡೀನ್ ಡಾ. ಸುನಿಲ್ ಮುದ್ದಯ್ಯ, ಡಾ. ಅನ್ಮೋಲ್ ಕಲ್ಹಾ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net