ಕೆ.ಸಿ.ಎಲ್ ನಾಲ್ಕರ ಹಂತಕ್ಕೆ ಪ್ರವೇಶಿಸಿದ ರಾಯಲ್ಸ್, ಫ್ರೆಂಡ್ಸ್ ಕ್ರಿಕೆಟರ್ಸ್

4mdka1
Published on
ಮಡಿಕೇರಿ: ಕೊಡಗು ಚಾಂಪಿಯನ್ಸ್ ಲೀಗ್ ನ ಎ ಪೂಲ್ ನ ಪಂದ್ಯಾಟದಲ್ಲಿ ರಾಯಲ್ಸ್ ವಿರಾಜಪೇಟೆ ಅಗ್ರ ಸ್ಥಾನಗಳಿಸಿದ್ದು, ಫ್ರೆಂಡ್ಸ್ ಕ್ರಿಕೆಟರ್ಸ್ ಎರಡನೇ ತಂಡವಾಗಿ ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡಿದೆ. ಆಡಿದ ಐದು ಪಂದ್ಯವನ್ನು ಗೆದ್ದುಕೊಂಡ ರಾಯಲ್ಸ್ ವಿರಾಜಪೇಟೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ಐದು ಪಂದ್ಯದಲ್ಲಿ ನಾಲ್ಕು ಪಂದ್ಯವನ್ನು ಗೆದ್ದುಕೊಂಡ ಫ್ರೆಂಡ್ಸ್ ಕ್ರಿಕೆಟರ್ಸ್ ಅಂತಿಮ ನಾಲ್ಕರ ಹಂತಕ್ಕೆ ಎರಡನೇ ತಂಡವಾಗಿ ಅರ್ಹತೆಯನ್ನು ಪಡೆದಿದೆ.
ಫ್ರೆಂಡ್ಸ್ ಹಾಗೂ ಕ್ರಿಯೇಟಿವ್ ತಂಡಗಳ‌ ನಡುವಿನ ಪಂದ್ಯಾಟದಲ್ಲಿ ಮೊದಲಿಗೆ ಬ್ಯಾಟ್ ಮಾಡಿದ ಫ್ರೆಂಡ್ಸ್ ತಂಡ 6 ಓವರ್ ನಲ್ಲಿ 63 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಕ್ರಿಯೇಟಿವ್ ತಂಡ ರಾಕೇಶ್ ಅವರ 36 ರನ್ ಗಳೊಂದಿಗೆ 44 ರನ್ ಗಳಿಸಿ ಸೋಲನುಭವಿಸಿತ್ತು.
ಎರಡನೇ ಪಂದ್ಯಾಟದಲ್ಲಿ ಟೀಂ ಕೊಂಬನ್ ನೀಡಿದ 66 ರನ್ ಗುರಿ ಬೆನ್ನಟ್ಟಿದ ರೆಡ್ ಬ್ಯಾಕ್ಸ್ ಸ್ಪೈಡರ್ಸ್ ತಂಡ  ಪ್ರದೀಪ್ ಅವರ 36 ರನ್ ಗಳ ಸಹಾಯದಿಂದ 5.1 ಓವರ್ ನಲ್ಲಿ‌ ಗುರಿ‌ ಮುಟ್ಟಿದರು. ಕೊಂಬನ್ ತಂಡದ ಪರವಾಗಿ ದರ್ಶಿತ್ 32 ಗಳಿಸಿದರು.
ರಾಯಲ್ಸ್ ನೀಡಿದ 79 ಗುರಿ ಬೆನ್ನಟ್ಟಿದ ರಾಂಬೋ ಕ್ರಿಕೆಟರ್ಸ್ 77 ರನ್ ಗಳಿಸಿ ಅಂತಿಮ ಕ್ಷಣದಲ್ಲಿ ಎಡವಿತ್ತು. ಫ್ರೆಂಡ್ಸ್ ಹಾಗೂ ರೆಡ್ ಬ್ಯಾಕ್ಸ್ ನಡುವಿನ ಪಂದ್ಯಾಟದಲ್ಲಿ ಫ್ರೆಂಡ್ಸ್ 85 ರನ್ ಗಳಿಸಿದರೆ, ಗೆಲುವಿಗಾಗಿ ಕಣಕ್ಕಿಳಿದು 66 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು.
ರಾಯಲ್ಸ್ ಹಾಗೂ ಕ್ರಿಯೇಟಿವ್ ನಡುವಿನ ಪಂದ್ಯಾಟದಲ್ಲಿ ರಾಯಲ್ಸ್ ಗಳಿಸಿದ 72 ರನ್ ಗಳ ಸವಾಲು ಬೆನ್ನಟ್ಟಿದ ಕ್ರಿಯೇಟಿವ್ 65 ರನ್ ಗಳಿಸಿ ಸೋಲನುಭವಿಸಿತ್ತು. ರಾಂಬೋ ನೀಡಿದ 61 ರನ್ ಗಳ ಪ್ರತಿಯಾಗಿ ಕಣಕ್ಕಿಳಿದ ಟೀಂ ಕೊಂಬನ್ 5.4 ಓವರ್ ನಲ್ಲಿ ಗೆಲುವಿನ ದಡ ಸೇರಿತು.
ಫ್ರೆಂಡ್ಸ್ 5 ವಿಕೆಟ್ ಕಳೆದುಕೊಂಡು 46 ಗಳಿಸಿದ್ದು, 5.2 ಓವರ್ ನಲ್ಲಿ ರಾಯಲ್ಸ್ ಗೆಲುವು ಸಾಧಿಸಿತ್ತು. ಟೀಮ್ ಕೊಂಬನ್ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಫ್ರೆಂಡ್ಸ್ ತಂಡಕ್ಕೆ 30 ರನ್ ಗುರಿ ನೀಡಿತ್ತು. ಫ್ರೆಂಡ್ಸ್ ತಂಡ 7 ಓವರ್ ನಲ್ಲಿ ಸುಲಭ ಜಯ ಗಳಿಸಿತ್ತು. ಸೋಮವಾರ ಪೂಲ್ ನ 6 ತಂಡಗಳ ನಡುವಿನ ಲೀಗ್ ಹಂತದ ಪಂದ್ಯಾಡ ನಡೆಯಲಿದ್ದು , ಪ್ರಬಲ ತಂಡಗಳು ಸೆಣಸಾಡಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net