ಕೊಡಗು ಚಾಂಪಿಯನ್ಸ್ ಲೀಗ್ (ಕೆಸಿಎಲ್) ಕ್ರಿಕೆಟ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ

3mdka4 - Copy
Published on
ಸಿದ್ದಾಪುರ : ಕೊಡಗು ಚಾಂಪಿಯನ್ಸ್ ಲೀಗ್ ನ ಐದನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟಕ್ಕೆ ಕರಡಿಗೋಡುವಿನ ಮೈದಾನದಲ್ಲಿ ಅದ್ಧೂರಿಯ ಚಾಲನೆ ನೀಡಲಾಗಿದ್ದು, ಏ ಗುಂಪಿನ 6 ತಂಡಗಳು ಗೆಲುವಿಗಾಗಿ ಸೆಣಸಾಡುತ್ತಿದೆ. ಕಾರ್ಯಕ್ರಮದ ಮೈದಾನ ಉದ್ಘಾಟನೆಯನ್ನು ಹಿರಿಯರಾದ ಕುಕ್ಕುನೂರು ಪುರುಷೋತ್ತಮ ನೆರವೇರಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜಿ.ಪಂ ಸದಸ್ಯ ಎಂ.ಎಸ್ ವೆಂಕಟೇಶ್, ಯುವ ಪ್ರತಿಭೆಗಳಿಗೆ ಕೆ.ಸಿ.ಎಲ್ ಉತ್ತಮ ವೇದಿಕೆಯಾಗಿದೆ. ಕಳೆದ ಐದು ವರ್ಷಗಳಿಂದ ಎಲೆಮರೆ ಕಾಯಿಯಂತೆ ಇರುವ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಗ್ರಾ.ಪಂ‌ ಅಧ್ಯಕ್ಷರಾದ ರೀನಾ ತುಳಸಿ‌ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಸಾರ್ವಜನಿಕ ಮೈದಾನ ಇಲ್ಲದೇ ಕ್ರೀಡಾಪಟುಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸಾರ್ವಜನಿಕ ಮೈದಾನ ನಿರ್ಮಿಸಲು ಗ್ರಾ.ಪಂ ನಿಂದ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷ ಸಾಬು ವರ್ಗೀಸ್ ಮಾತನಾಡಿ, ಮೈದಾನದ ಕೊರತೆಯ ನಡುವೆಯೂ ಕರಡಿಗೋಡುವಿನಲ್ಲಿ ಪೂರ್ಣ ಪ್ರಮಾಣದ ಮೈದಾನ ನಿರ್ಮಿಸಿ, ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ. ಜಿಲ್ಲೆಯ ಕ್ರಿಕೆಟ್ ಪಂದ್ಯಾವಳಿಗಳ ಪೈಕಿ ಕೆ.ಸಿ.ಎಲ್ ಅಗ್ರಸ್ಥಾನ ಪಡೆದಿದೆ ಎಂದದರು.
 ಸಿದ್ದಾಪುರ ಗ್ರಾ.ಪಂ ಪಿ.ಡಿ.ಓ ವಿಶ್ವನಾಥ್, ನೆಲ್ಯಹುದಿಕೇರಿ ಪಿ.ಡಿ.ಓ ಅನಿಲ್ ಕುಮಾರ್ ಮಾತನಾಡಿದರು.
ಕೆ.ಸಿ.ಎಲ್ ಸಮಿತಿಯ ಅಧ್ಯಕ್ಷರಾದ ರೆಜಿತ್ ಕುಮಾರ್ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಮೈದಾನ ಕಾಮಗಾರಿ ಕೈಗೊಳ್ಳಲಾಗಿದ್ದು, ದಾನಿಗಳ ಸಹಕಾರದಿಂದ ಪಂದ್ಯಾವಳಿಯು ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲೆಯ ವಿವಿಧ ಭಾಗದ ಕ್ರೀಡಾಪಟುಗಳಿಗೆ ಕೆ.ಸಿ.ಎಲ್ ಉತ್ತಮ ವೇದಿಕೆಯಾಗಿದೆ ಎಂದರು.
ವೇದಿಕೆಯಲ್ಲಿ  ಕ್ರೀಡಾಕೂಟದ ಮೈದಾನ ದಾನಿಗಳಾದ ಕುಕ್ಕುನೂರು ಪುರುಷೋತ್ತಮ, ದೇವಪ್ರಕಾಶ್, ಕವಿತಾ ಪ್ರಕಾಶ್, ಇವಾಲ್ವ್ ಬ್ಯಾಕ್ ವ್ಯವಸ್ಥಾಪಕರಾದ ಜಾಯ್ ದೀಪ್ ಬ್ಯಾನರ್ಜಿ,ಕ್ರಿಯೇಟಿವ್ ಮಾಲೀಕರಾದ ಖಲೀಲ್, ಪ್ರಮುಖರಾದ  ಶಿಯಾಬ್, ಗೌತಮ್ ಪ್ರಸಾದ್, ಜಂಶೀರ್, ಬಾವ ಮಾಲ್ದಾರೆ, ಸಲೀಂ, ಬಷೀರ್, ರಿಯಾಜ್, ಶಫೀಕ್, ನಾ ಕನ್ನಡಿಗ ಟಾಮಿ ಥೋಮಸ್ ಸೇರಿದಂತೆ ಇನ್ನಿತರರು ಇದ್ದರು.
ರಾಯಲ್ಸ್ ವಿರಾಜಪೇಟೆ ಅಗ್ರಸ್ಥಾನ
ಪ್ರಥಮ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿ ನಿಗದಿತ6 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 63 ರನ್ ಗಳಿಸಿದರು‌. ಗುರಿ ಬೆನ್ನಟ್ಟಿದ ಕ್ರಿಯೇಟಿವ್ ಕ್ರಿಕೆಟರ್ಸ್ ತಂಡ 6 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿ ಸೋಲನ್ನು ಅನುಭವಿಸಿತ್ತು.
ಟೀಂ ಕೊಂಬನ್ ಹಾಗೂ ರೆಡ್ ಬ್ಯಾಕ್ಸ್ ಸ್ಪೈಡರ್ಸ್ ಮಡಿಕೇರಿ ನಡುವಿನ ಪಂದ್ಯಾಟದಲ್ಲಿ ದರ್ಶಿತ್ 32 ಹಾಗೂ ಇಬ್ರಾಹಿಂ 18 ರನ್ ಗಳ ಸಹಾಯದಿಂದ 66 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ರೆಡ್ ಬ್ಯಾಕ್ಸ್ ತಂಡದ ಪ್ರದೀಪ್ 36 ಹಾಗೂ ನಾಯಕ ಯತೀಶ್ 23 ರನ್ ಗಳ ಸಹಾಯದಿಂದ ಗೆಲುವಿನ ನಗೆ ಬೀರಿತ್ತು. ಯತೀಶ್ 4 ವಿಕೆಟ್ ಪಡೆದರು.
ರಾಯಲ್ಸ್ ವಿರಾಜಪೇಟೆ ತಂಡದ ಪರವಾಗಿ ಹ್ಯಾರಿಸ್ 34, ಸತ್ಯಪ್ರಭು 22 ರನ್ ಗಳಿಸಿದ ಪರಿಣಾಮ ತಂಡ 79 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ರಾಂಬೋ ಕ್ರಿಕೆಟರ್ಸ್ ನಿಗದಿತ 6 ಓವರ್ ನಲ್ಲಿ‌ 77 ರನ್ ಗಳಿಸಿ ಗೆಲುವಿನ ಸನಿಹದಲ್ಲಿ ಎಡವಿತ್ತು. ರಾಂಬೋ ತಂಡದ ಪರ ಮನು ಭಾಗವತ್ 34 ರನ್ ಗಳಿಸಿದರು.
ರೆಡ್ ಬ್ಯಾಕ್ಸ್ ಸ್ಪೈಡರ್ಸ್ ಹಾಗೂ ಫ್ರೆಂಡ್ಸ್ ಕ್ರಿಕೆಟರ್ಸ್ ನಡುವಿನ ಪಂದ್ಯಾಟದಲ್ಲಿ ಮುಸ್ತಫಾ 42, ಆಜಾದ್ 39 ರನ್ ಗಳ ನೆರವಿನಿಂದ ಫ್ರೆಂಡ್ಸ್ ತಂಡ 85 ರನ್ ಕಲೆಹಾಕಿತ್ತು. ನಿಗದಿತ6 ಓವರ್ ನಲ್ಲಿ ರೆಡ್ ಬ್ಯಾಕ್ಸ್ ತಂಡ 5 ವಿಕೆಟ್ ಕಳೆದುಕೊಂಡು 66 ರನ್ ಗಳಿಸಲಷ್ಟೆ ಶಕ್ತವಾಯಿತ್ತು.
ರಾಯಲ್ಸ್ ವಿರಾಜಪೇಟೆ ತಂಡ ನೀಡಿದ 72 ರನ್ ಗುರಿ ಬೆನ್ನಟ್ಟಿದ ಕ್ರಿಯೇಟಿವ್ ಕ್ರಿಕೆಟರ್ಸ್ ತಂಡ ನಿಗದಿತ ಓವರ್ ನಲ್ಲಿ 65 ರನ್ ಗಳಿಸಿ ಸೋಲನ್ನು ಅನುಭವಿಸಿತ್ತು. ರಾಯಲ್ಸ್ ಪರವಾಗಿ ಸುದೀಶ್ 30 ರನ್ ಗಳಿಸಿ ಮಿಂಚಿದರು. ಕ್ರಿಯೇಟಿವ್ ಪರವಾಗಿ ಸುಜಿತ್ ಗೋಣಿಕೊಪ್ಪ 4 ವಿಕೆಟ್ ಪಡೆದರು.
ರಾಂಬೋ ಹಾಗೂ ಟೀಂ ಕೊಂಬನ್ ತಂಡದ ನಡುವಿನ ಪಂದ್ಯಾಟದಲ್ಲಿ ರಾಂಬೋ ಪರವಾಗಿ ನಾಯಕ ಶಂಶುದ್ದೀನ್ 25, ಮನು 19 ರನ್ ಗಳಿಸಿ, ಎದುರಾಳಿ ಕೊಂಬನ್ ತಂಡಕ್ಕೆ 62 ರನ್ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಕೊಂಬನ್ ತಂಡ ನಾಯಕ ಅಕ್ಷಯ್ 15, ದರ್ಶಿತ್ 16  ಹಾಗೂ ದರ್ಶಿತ್ 13 ರನ್ ಗಳ ನೆರವಿನಿಂದ 5.4 ಓವರ್ ನಲ್ಲೇ ಗೆಲುವಿನ ದಡ ಸೇರಿತ್ತು.
ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ ನಿಗದಿತ 6 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿತ್ತು. ಫ್ರೆಂಡ್ಸ್ ಪರವಾಗಿ ಅಣ್ಣು ಕ್ರಿಶ್ 27 ರನ್ ಪೇರಿಸಿದರು. ಗುರಿ ಬೆನ್ನಟ್ಟಿದ ರಾಯಲ್ಸ್ ತಂಡ ಸಂದೇಶ್ 29 ಹಾಗೂ ಗಣೇಶ್ 16 ರನ್ ಗಳೊಂದಿಗೆ 5.2 ಓವರ್ ನಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ‌ ಕಾಯ್ದುಕೊಂಡಿದೆ.
ReplyForward
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net