

ಮೈಸೂರು: ಇಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್‌ನಿಂದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಪ್ಲಸ್ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ ಕರ್ನಾಟಕ ಮುಖ್ಯಸ್ಥ ಜೆ. ಅನಿಲ್‌ಕುಮಾರ್ ಹೇಳಿದರು.
ಪ್ರಥಮ, ದ್ವಿತೀಯ ವಿಜ್ಞಾನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತ್ಯುನ್ನತ ಕಾಲೇಜುಗಳಲ್ಲಿ ಪ್ರವೇಶ ದೊರಕಿಸಿಕೊಡುವ ನಿಟ್ಟಿನಲ್ಲಿ ಏಪ್ರಿಲ್‌ನಿಂದ ತರಬೇತಿ ತರಗತಿ ಆರಂಭಿಸಲಾಗುವುದು ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರ ನಡೆಸುವ ಕೆಸಿಇಟಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ಸಿಬಿಎಸ್‌ಇ ಪಠ್ಯಕ್ರಮದ ಜತೆಗೆ ರಾಜ್ಯಪಠ್ಯಕ್ರಮವನ್ನು ಸಮ್ಮಿಲನಗೊಳಿಸಿ ಗುಣಮಟ್ಟದ ಪಠ್ಯಕ್ರಮವನ್ನು ಆಂಗ್ಲ ಭಾಷೆಯಲ್ಲಿ ರಚಿಸಲಾಗಿದೆ. ಇದರಿಂದ ರಾಜ್ಯದ ಇಂಜಿನಿಯರಿಂಗ್ ಪ್ರವೇಶ ಹಾಗೂ ರಾಷ್ಟ್ರೀಯ ಮಟ್ಟದ ಇಂಜಿನಿಯರಿಂಗ್ ಪ್ರವೇಶ ಎರಡಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಳೆದ ಬಾರಿಯ ಪರೀಕ್ಷೆಯಲ್ಲಿ 3.45 ಲಕ್ಷ ವಿದ್ಯಾರ್ಥಿಗಳು ಕೆಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಆಕಾಶ್ ಸಂಸ್ಥೆಯಲ್ಲಿ ತರಬೇತಿ ಪಡೆದವರಲ್ಲಿ ಉನ್ನತ ದರ್ಜೆಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಿದೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳಿಗೂ ಈ ಅವಕಾಶ ದೊರೆಯುವಂತೆ ಮಾಡಲು ಶ್ರಮಿಸಲಾಗುತ್ತಿದೆ ಎಂದರು.
ಕೆಸಿಇಟಿ ಅಲ್ಲದೇ ನೀಟ್, ಜೆಇಇ, ಆರ್ಕಿಟೆಕ್ಚರ್, ಬ್ಯಾಚುಲರ್ ಆಫ್ ಯೋಗ ಮತ್ತು ನ್ಯಾಚುರೋಪತಿ, ನರ್ಸಿಂಗ್, ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್, ಪಶುಸಂಗೋಪನೆ ಸೇರಿದಂತೆ ಇನ್ನಿತರ ಪ್ರವೇಶ ಪರೀಕ್ಷೆಗಳೀಗೆ ತರಬೇತಿ ನೀಡಲಾಗುವುದು ಎಂದರು.
ಸತತ ಮೂರು ವರ್ಷ ಟಾಪರ್: ಆಕಾಶ್ ಸಂಸ್ಥೆಯಲ್ಲಿ ತರಬೇತಿ ಪಡೆದವರು ಸತತ ಮೂರು ವರ್ಷ ಕೆಸಿಇಟಿಯಲ್ಲಿ ರಾಜ್ಯಕ್ಕೆ ಟಾಪರ್‌ಗಳಾಗಿ ಹೊರ ಹೊಮ್ಮಿದ್ದಾರೆ. 2021ರಲ್ಲಿ ಮೈಸೂರಿನ ಎಚ್.ಕೆ.ಮೇಘನ್, 2022ರಲ್ಲಿ ಅಪೂರ್ವ್ ಟಂಡನ್, 2023ರಲ್ಲಿ ಎನ್.ವ್ನಿೇಶ್ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂತಸ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಕೆಸಿಇಟಿ ನೋಂದಣಿಗೆ ಚಾಲನೆ ನೀಡಲಾಯಿತಲ್ಲದೇ, ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಆಸಕ್ತ ವಿದ್ಯಾರ್ಥಿಗಳು ಡಿಡಿಡಿ..ಚ್ಚ.ಜ್ಞಿ ಅನ್ನು ಸಂಪರ್ಕಿಸುವಂತೆ ಕೋರಲಾಯಿತು.
ಆಕಾಶ್ ಇನ್ಸಿಟಿಟ್ಯೂಟ್‌ನ ಪ್ರಾದೇಶಿಕ ಮಾರುಕಟ್ಟೆ ಬೆಳವಣಿಗೆ ಮುಖ್ಯಸ್ಥ ದೀಪಕ್ ಕಾವಲೆ, ಸಬ್ ಅರ್ಬನ್ ಶಾಖೆಯ ವ್ಯವಸ್ಥಾಪಕ ದೀಪಕ್ ಇದ್ದರು.