ಕೆಸಿಡಿಯ ನಾಗರಾಜ, ಪ್ರಸನ್ನಕುಮಾರ `ಓಟದ ದಾಖಲೆ'

13 Dwd 6 Men 5000 Run New Meet Record (511) Nagaraj Devate KCD College
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿಶ್ವವಿದ್ಯಾಲಯದ 71ನೇ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟದ 2ನೇ ದಿನವಾದ ಶುಕ್ರವಾರ 2 ಕೂಟ ದಾಖಲೆಗಳು ನಿರ್ಮಾಣವಾದವು.

5,000 ಮೀ. ಓಟದಲ್ಲಿ ಕರ್ನಾಟಕ ಆರ್ಟ್ಸ್ ಕಾಲೇಜಿನ ನಾಗರಾಜ ದಿವಟೆ 14:45.60 ನಿಮಿಷದಲ್ಲಿ ಗುರಿ ತಲುಪಿ 1992ರಲ್ಲಿ ಇಲಕಲ್‌ನಲ್ಲಿ ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಎಸ್.ಐ. ಕುಂಬಾರ ನಿರ್ಮಿಸಿದ್ದ ದಾಖಲೆ (15:05.32 ನಿಮಿಷ) ಮುರಿದು ನೂತನ ಕೂಟ ದಾಖಲೆ ನಿರ್ಮಿಸಿ ಬಂಗಾರದ ಪದಕ ಪಡೆದÀರು.

200 ಮೀ. ಓಟದಲ್ಲಿ ಕರ್ನಾಟಕ ಆರ್ಟ್ಸ್ ಕಾಲೇಜಿನ ಪ್ರಸನ್ನಕುಮಾರ ಮಣ್ಣೂರ 21.41 ನಿಮಿಷದಲ್ಲಿ ಗುರಿ ತಲುಪಿ 2019ರಲ್ಲಿ ಧಾರವಾಡದಲ್ಲಿ ಹುಬ್ಬಳ್ಳಿಯ ಕೆ.ಎಲ್.ಇ ಆರ್ಟ್ಸ್ ಕಾಲೇಜಿನ ವಿನಾಯಕ ಸೊಂಟಣ್ಣವರ ಹೆಸರಿನಲ್ಲಿದ್ದ 21.78 ನಿಮಿಷದ ದಾಖಲೆ ಮುರಿದು ಕೂಟ ದಾಖಲೆ ನಿರ್ಮಿಸಿ ಬಂಗಾರದ ಪದಕ ಪಡೆದರು.

ಟಾಪ್ 3 ಕಾಲೇಜುಗಳು: ಧಾರವಾಡದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಅಥ್ಲಿಟ್‌ಗಳು 17 ಚಿನ್ನ, 7 ಬೆಳ್ಳಿ, 4 ಕಂಚಿನ ಪದಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಧಾರವಾಡದ ಕರ್ನಾಟಕ ಕಲಾ ಕಾಲೇಜು 7 ಚಿನ್ನ, 7 ಬೆಳ್ಳಿ, 4 ಕಂಚು ಸೇರಿ 15 ಪದಕ ಪಡೆದು ದ್ವಿತೀಯ ಹಾಗೂ ಗದಗನ ಶ್ರೀ ಪ್ರಭು ರಾಜೇಂದ್ರ ದೈಹಿಕ ಶಿಕ್ಷಣ ಕಾಲೇಜು 2 ಚಿನ್ನ, 1 ಬೆಳ್ಳಿ ಪದಕ ಪಡೆದು ತೃತೀಯ ಸ್ಥಾನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net