ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಹಿಳಾ ದಿನಾಚರಣೆ ನಾಳೆ

kcci new
Published on

ಹುಬ್ಬಳ್ಳಿ : ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಉದ್ದಿಮೆದಾರರ ಸಮಿತಿ ವತಿಯಿಂದ ಮಾ. 18ರಂದು ಮಧ್ಯಾಹ್ನ 3.30ಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿ ಅಧ್ಯಕ್ಷೆ ನೀಪಾ ಮೆಹತಾ, 18.5 ಸೆಕೆಂಡ್​ಗಳಲ್ಲಿ ವೇಗವಾಗಿ ಸೀರೆ ಉಡಿಸುವುದಕ್ಕಾಗಿ ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ರಚಿಸಿದ ಡಾಲಿ ಜೈನ್ ಹಾಗೂ ಆಹಾರ ವರ್ಗದಲ್ಲಿ ಅತ್ಯುತ್ತಮ ಸೃಷ್ಟಿಕರ್ತ ಎಂಬ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪಡೆದ ‘ಕಬಿತಾಸ್ ಕಿಚನ್’ನ ಕಬಿತಾ ಸಿಂಗ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

15 ವರ್ಷ ಮೇಲ್ಪಟ್ಟ ಮಹತ್ವಾಕಾಂಕ್ಷಿ ಮಹಿಳೆಯರು ಪಾಲ್ಗೊಳ್ಳಬಹುದು. 500ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಪಲ್ಲವಿ ಮಲಾನಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net