ಕೆಸಿಸಿಐನಿಂದ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ

IMG_20230801_214427_843-2.jpg
Published on

ಹುಬ್ಬಳ್ಳಿ: ಹಳ್ಳಿಗಳ ದೇಶ ಭಾರತದ ಜನರ ಜೀವನ ಮಟ್ಟ ಸುಧಾರಣೆಯಾಗಬೇಕಾದರೆ ಗ್ರಾಮಗಳ ಉದ್ದಾರವಾಗಬೇಕು. ಶೇ. 75ಕ್ಕಿಂತ ಹೆಚ್ಚಿನ ಜನರು ಕೃಷಿ ಮೇಲೆ ಅವಲಂಬನವಾಗಿದ್ದು, ಕೃಷಿ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಎಂದು ಮುಂಬೈನ ಮಹಿಕೋ ಪ್ರೈವೇಟ್ ಲಿಮಿಟೆಡ್ ಚೇರ್ಮನ್ ರಾಜೇಂದ್ರ ಬರವಾಲೆ ಹೇಳಿದರು.

ಇಲ್ಲಿಯ ಕ್ಯೂಬಿಕ್ಸ್ ಹೋಟೆಲ್ ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 95ನೇ ಸಂಸ್ಥಾಪಕ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಮೊದಲೆಲ್ಲ ಆಹಾರಧಾನ್ಯ ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಹಸಿರು ಕ್ರಾಂತಿಯ ನಂತರ ರಫ್ತು ಮಾಡುವ ಮಟ್ಟಿಗೆ ಬೆಳೆದಿದೆ. ಹೈಬ್ರಿಡ್ ತಳಿ ಅಭಿವೃದ್ಧಿಗೆ ಇನ್ನಷ್ಟು ಅವಕಾಶಗಳಿವೆ. ಇದರಿಂದ ಕೃಷಿ ಉತ್ಪಾದನೆ ಹೆಚ್ಚಾಗಲಿದೆ ಎಂದರು.

ಹೈಬ್ರಿಡ್ ತಳಿಯ ಬೀಜಗಳನ್ನು ಕರ್ನಾಟಕದ ರೈತರು ಅಪ್ಪಿಕೊಂಡು ಹೆಚ್ಚಿನ ಬೆಂಬಲ ನೀಡಿದರು. ಅದರಲ್ಲೂ ಧಾರವಾಡ ಹಾಗೂ ಸುತ್ತಲಿನ ಜಿಲ್ಲೆಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೃಷಿ ಉತ್ಪಾದಕತೆ ಅಧಿಕಗೊಳಿಸುವುದೊಂದೆ ನಮ್ಮ ಉದ್ದೇಶ ಎಂದು ತಿಳಿಸಿದರು.

ಸಕಾರಾತ್ಮಕ ಚಿಂತನೆ ಅಗತ್ಯ: ವಾಣಿಜ್ಯ ರತ್ನ ಪುರಸತರು, ಶಿವಮೊಗ್ಗದ ಕೆಟಿಜಿ ಗ್ರೂಪ್ ಸ್ಥಾಪಕ ಜೈರಾಮ್ ಕಿಮ್ಮನೆ ಮಾತನಾಡಿ, ವಾಣಿಜ್ಯೋದ್ಯಮ ಬೆಳೆಸಲು ಮುಖ್ಯವಾಗಿ ಜನಸಂಪರ್ಕ, ಸಕಾರಾತ್ಮಕ ಚಿಂತನೆ ಹಾಗೂ ಆಥಿರ್ಕ ಶಿಸ್ತು ಬಹಳ ಮುಖ್ಯವಾಗುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಸಿಸಿಐ ಅಧ್ಯಕ್ಷ ವಿನಯ ಜವಳಿ ಮಾತನಾಡಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಹಲವು ವರ್ಷಗಳಿಂದ ಉದ್ಯಮಿಗಳಿಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರದ ಜತೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ನವೋದ್ಯಮಿಗಳಿಗೆ ಪ್ರೋತ್ಸಾಹಿಸುವ, ತೆರೆಮರೆಯ ಕೈಗಾರಿಕೋದ್ಯಮಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಸಂಸ್ಥಾಪಕರ ದಿನಾಚರಣೆ ಸಮಿತಿ ಚೇರ್ಮನ್ ದೀಪಕ ಪಾಟೀಲ, ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು.

ಕೆಸಿಸಿಐ ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಎಸ್.ಪಿ. ಸಂಶಿಮಠ, ಬಿ.ಎಸ್. ಸತೀಶ, ಗೌರವ ಕಾರ್ಯದಶಿರ್ ಪ್ರವಿಣ ಅಗಡಿ, ಜತೆ ಗೌರವ ಕಾರ್ಯದಶಿರ್ ಶಂಕರ ಕೋಳಿವಾಡ, ಮಾಜಿ ಅಧ್ಯಕ್ಷರಾದ ಶಂಕ್ರಣ್ಣ ಮುನವಳ್ಳಿ, ಎಂ.ಸಿ. ಹಿರೇಮಠ, ವಿ.ಪಿ. ಲಿಂಗನಗೌಡರ, ರಮೇಶ ಪಾಟೀಲ, ಮಹೇಂದ್ರ ಲದ್ದಡ, ಲಿಂ. ಮುರುಗಯ್ಯಸ್ವಾಮಿ ಜಂಗಿನ ಕುಟುಂಬದವರು, ಇತರರು ಇದ್ದರು.

ವಾಣಿಜ್ಯ ರತ್ನ ಪ್ರಶಸ್ತಿ: ಕೆಟಿಜಿ ಗ್ರೂಪ್ನ ಜೈರಾಮ್ ಕಿಮ್ಮನೆ, ಬೆಳಗಾವಿಯ ಓರಿಯನ್ ಹೈಡ್ರಾಲಿಕ್ಸ್ ಲಿಮಿಟೆಡ್ನ ಕೀತ್ ಮಚಾಡೊ, ಗಂಗಾವತಿ ಸಿಲ್ಕ್ನ ಆನಂದ ಕಮತಗಿ, ಎಕ್ಸೀಡ್ ಕ್ರಾಪ್ ಸೈನ್ಸ್ ಲಿಮಿಟೆಡ್ನ ಚಂದ್ರಶೇಖರ ಬಾಗೇವಾಡಿ, ಬಳ್ಳಾರಿಯ ಶ್ರೀಸಾಯಿ ಗಣೇಶ ಕಾಟನ್ ಮಿಲ್ನ ಪಿ. ದೊಡ್ಡ ಬಸವನಗೌಡ, ರಾಣೆಬೆನ್ನೂರ ವಿಭಾ ್ಯಾಶನ್ವೇರ್ ಹೇಮಲತಾ ಯಡಕಿ ಅವರಿಗೆ ವಾಣಿಜ್ಯ ರತ್ನ ಪ್ರದಾನ ಮಾಡಲಾಯಿತು.

ನವೋದ್ಯಮಿ ಪ್ರಶಸ್ತಿಯನ್ನು ವೈಡ್ ಮೊಬಿಲಿಟಿ ಮೆಕಾಟ್ರಾನಿಕ್ಸ್ ಲಿಮಿಟೆಡ್ನ ಶೇಖರ ಬಸವಣ್ಣ ಮತ್ತು ರೋಹಿಣಿ ಟಪಾಂಡೆ ಹಾಗೂ ಅಸ್ಟ್ರ ಡಿೆನ್ಸ್ನ ಅಂಕುಶ ಕೊರವಿ ಅವರಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net