ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳ ಹಾಗೂ ಆಡಳಿತ ಮಂಡಳಿ ಸದಸ್ಯರ ಸಭೆಯನ್ನು ಅ. 15ರಂದು ಮಧ್ಯಾಹ್ನ 12.30ಕ್ಕೆ ಕೆಸಿಸಿಐನಲ್ಲಿ ಆಯೋಜಿಸಲಾಗಿದೆ.
ಸಂಸ್ಥೆಯ ಬೈಲಾ ಅನ್ವಯ 18 ಸದಸ್ಯರನ್ನು ಒಂದು ವರ್ಷದ ಅವಧಿಗೆ ಆಡಳಿತ ಮಂಡಳಿಗೆ ನೇಮಿಸಿಕೊಳ್ಳಲಾಗುತ್ತದೆ.
ಸಂಘ ಸಂಸ್ಥೆಗಳ ಪ್ರತಿನಿಧಿಗಳು 8, ಕಂಪನಿ ಮತ್ತು ಸೊಸೈಟಿಯ ಪ್ರತಿನಿಧಿಗಳು 5 ಹಾಗೂ ವೃಕ್ತಿ ಮತ್ತು ಫರ್ಮ ಪ್ರತಿನಿಧಿಗಳು ಐವರು ಸೇರಿ 18 ಜನರನ್ನು ನೇಮಿಸುವುದು ಸೇರಿ ವಿವಿಧ ವಿಷಯಗಳ ಚರ್ಚೆ ನಡೆಯಲಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಉದಯ ರೇವಣಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.