

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಸುವರ್ಣ ಮಹೋತ್ಸವ ವಿಶ್ವಸ್ಥ ಮಂಡಳಿ ಅಡಿಯಲ್ಲಿ ಮುಂಬೈನ ಫೋರಂ ಆಫ್ ಫ್ರೀ ಎಂಟರಪ್ರೈಸಿಸ್ ಸಹಯೋಗದೊಂದಿಗೆ ಎ.ಡಿ. ಶ್ರಾಫ್ ಇವರ ಸ್ಮರಣಾರ್ಥ ಅಂತರ&ಕಾಲೇಜು ಕನ್ನಡ ಮತ್ತು ಆಂಗ್ಲ ಭಾಷಣ ಸ್ಪರ್ಧೆ ಆಯೋಜಿಸಿತ್ತು.
ವಿವಿಧ ವಿಷಯಗಳ ಮೇಲೆ ಸ್ಪರ್ಧೆ ನಡೆಯಿತು. ತೀರ್ಪುಗಾರರಾಗಿ ಪ್ರೊ. ಲಿಂಗರಾಜ ಅಂಗಡಿ, ಪ್ರೊ. ಕೆ.ಎಸ್. ಕೌಜಲಗಿ, ದೇವದತ್ತು ಮತ್ತು ಪ್ರೊ. ಶಿವಕುಮಾರ ಪ್ರಭಯ್ಯನವರಮಠ ಕಾರ್ಯನಿರ್ವಹಿಸಿದರು.
ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಗೌರವ ಕಾರ್ಯದಶಿರ್ ರವೀಂದ್ರ ಬಳಿಗಾರ ಮತ್ತು ಜತೆ ಗೌರವ ಕಾರ್ಯದಶಿರ್ ಮಹೇಂದ್ರ ಸಿಂಘಿ ವಿಜೇತರಿಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನ ವಿತರಿಸಿದರು.
ಕನ್ನಡ ವಿಭಾಗದ ಪ್ರಥಮ ಬಹುಮಾನ ಧಾರವಾಡ ಕಿಟೆಲ್ ವಿಜ್ಞಾನ ಕಾಲೇಜಿನ ಸಚಿನ್ ಪಾಟೀಲ್, ದ್ವೀತಿಯ ಆಕ್ಸರ್ಡ್ ಕಾಲೇಜಿನ ಸೌರಭ ಮುರುಡಿ, ತೃತೀಯ ಕಿಟೆಲ್ ಕಾಲೇಜಿನ ಕಿರಣ ಉಳ್ಳಾಗಡ್ಡಿ. ಸಮಾಧಾನಕರ ಬಹುಮಾನ& ಪಿ.ಸಿ. ಜಾಬಿನ್ ಕಾಲೇಜಿನ ಸುಶ್ಮಿತಾ ಯು.ಕೆ. ಹಾಗೂ ಎಸ್ಜೆಎಂವಿಎಸ್ ಕಾಲೇಜಿನ ಗಾಯತ್ರಿ ಜಾಧವ್.
ಇಂಗ್ಲೀಷ ವಿಭಾಗದಲ್ಲಿ ಪ್ರಥಮ ಚೇತನಾ ಕಾಲೇಜಿನ ಶ್ರೀನಿಧಿ ಕಾಮತ್, ದ್ವೀತಿಯ ಕೆಎಲ್ಇ ಕಾಮರ್ಸ್ ಕಾಲೇಜಿನ ದೇವಾಂಶ್ ಮಹಾಜನ್, ಎಸ್ಜೆಎಂವಿಎಸ್ ಕಾಲೇಜಿನ ಗಾಯತ್ರಿ ಜಾಧವ್, ತೃತೀಯ ಕೆಎಲ್ಇ ಕಾಮರ್ಸ್ ಕಾಲೇಜಿನ ಉಮಿಯಾ ಸಫಿಯಾ ಅಲಿ ಪಡೆದರು. ಅಭಯ್ ಭದ್ರಿ, ಸಂಜನಾ ಹಾವನೂರ ಸಮಾಧಾನಕರ ಬಹುಮಾನ ಪಡೆದರು.