

ಹುಬ್ಬಳ್ಳಿ: ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳೇ ದೇಶದ ಶೇ. 90ರಷ್ಟು ಜನರಿಗೆ ಉದ್ಯೋಗ ನೀಡಿವೆ. ಅವು ಬದುಕಿದರೆ ಭಾರತ ಜೀವಿಸಬಲ್ಲದು. ವಿಪರ್ಯಾಸ ಎಂದರೆ ಕೈಗಾರಿಕಾ ನೀತಿ, ನಿರೂಪಣೆಯಲ್ಲಿ ಇವರು ಇರುವುದೇ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಇದೇ ಮೊದಲ ಬಾರಿ ಪರಿಚಯಿಸಿದ ಎಕ್ಸಪೋರ್ಟ್ ಎಕ್ಸಲ್ಲನ್ಸ್ ಅವಾರ್ಡ್ಗಳನ್ನು ಶನಿವಾರ 10 ಉದ್ಯಮಿಗಳಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
ಕಳೆದ 10 ವರ್ಷದಲ್ಲಿ ಇಂಧನ ಬೆಲೆ ಗಗನಕ್ಕೆ ಏರಿದೆ. ಇದರ ಬಗ್ಗೆ ಪ್ರಜ್ಞಾವಂತರು ಮಾತನಾಡುವುದಿಲ್ಲ. ಪ್ರಶ್ನೆ ಮಾಡುವುದಿಲ್ಲ. ಸಣ್ಣ ಕೈಗಾರಿಕೆ ಬದುಕಲು ಉತ್ತಮ ಕೈಗಾರಿಕಾ ನೀತಿ ಬೇಕು. ಆತ್ಮನಿರ್ಭರ ಭಾರತ ಸುಮ್ಮನೇ ಆಗಿ ಬಿಡುವುದಿಲ್ಲ. ಪೂರಕ ನೀತಿ ರೂಪಿಸಿದಾಗ ಸಾಧ್ಯವಾಗುತ್ತದೆ ಎಂದು ವಿಮರ್ಶೆ ಮಾಡಿದರು.
ವಾಣಿಜ್ಯೋದ್ಯಮ ಸಂಸ್ಥೆಯವರು ಯಾವುದೇ ರಾಜಕೀಯ ಪಕ್ಷಕ್ಕೆ ಅಂಟಿಕೊಳ್ಳದೇ ನಿಮ್ಮ ಅವಶ್ಯಕತೆಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರಗಳನ್ನು ಗಟ್ಟಿಯಾಗಿ ಕೇಳಿ, ತಪು$್ಪಗಳನ್ನು ಎತ್ತಿ ಹಿಡಿಯಿರಿ ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ಸ್ಯಾಮ್ ಅಗ್ರಿ ಗ್ರುಪ್ನ ಜಿವಿಕೆ ನಾಯ್ಡು ಮಾತನಾಡಿ, ದಾಳಿಂಬೆ ರ್ತು ಆರಂಭಿಸಿದಾಗ ಹಲವು ಸವಾಲುಗಳು ಎದುರಾಗಿದ್ದವು. ಅವುಗಳನ್ನು ನಿಭಾಯಿಸಿಕೊಂಡು ಮುಂದಡಿ ಇಟ್ಟ ನಂತರ ಈಗ ಉತ್ತಮ ಲ ಸಿಗುತ್ತಿದೆ. ತೋಟಗಾರಿಕೆ ಬೆಳೆಗಳ ರಫ್ತಿಗೆ ಹೆಚ್ಚಿನ ಅವಕಾಶಗಳಿವೆ ಎಂದರು.
ಅಶೋಕ ಐರನ್ ಗ್ರುಪ್ನ ಜಯಂತ ಹುಂಬರವಾಡಿ ಮಾತನಾಡಿ, ಭಾರತದ ರಫ್ತು ಪ್ರಮಾಣ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಮೂಲಕ ಆಮದು ಕಡಿಮೆ ಮಾಡಬಹುದು. ಭಾರತಕ್ಕೆ ರಫ್ತು ಮಾರುಕಟ್ಟೆಯಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ ಎಂದರು.
ಕೆಸಿಸಿಐ ಉಪಾಧ್ಯಕ್ಷರಾದ ಎಸ್.ಪಿ. ಸಂಶೀಮಠ, ಬಿ.ಎಸ್. ಸತೀಶ, ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಚೇರ್ಮನ್ ವಿವೇಕ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಸಿಸಿಐ ಅಧ್ಯಕ್ಷ ವಿನಯ ಜವಳಿ ಸ್ವಾಗತಿಸಿದರು. ಪ್ರಕಾಶ ಕೊಣ್ಣೂರ, ಅಂಜನಾ ಬಸನಗೌಡರ, ಅಶೋಕ ಗಡದ ಅವರು ಅತಿಥಿಗಳ ಪರಿಚಯಿಸಿದರು. ಗೌರವ ಕಾರ್ಯದಶಿರ್ ಪ್ರವಿಣ ಅಗಡಿ ವಂದಿಸಿದರು.
ಪ್ರಶಸ್ತಿ ಪ್ರದಾನ: ರಫ್ತು ಮಾರ್ಕೆಟ್ನಲ್ಲಿ ವಿಶೇಷ ಸಾಧನೆ ಮಾಡಿದ 10 ಜನರಿಗೆ ಎಕ್ಸಪೋರ್ಟ ಎಕ್ಸಲ್ಲನ್ಸ್ ಅವಾರ್ಡ್ ನೀಡಿ ಗೌರವಿಸಲಾಯಿತು. ಮೈಕ್ರೋಫಿನಿಶ್ ವಾಲ್ವ ಪೆವೇಟ್ ಲಿಮಿಟೆಡ್ನ ತಿಲಕ್ ವಿಕಂಶಿ, ಸ್ನೇಹಂ ಟೇಪಿಂಗ್ ಸಲ್ಯುಷನ್ಸ್ ಲಿಮಿಟೆಡ್ನ ಅನಿಶ್ ಮೇತ್ರಾನಿ (ಸುನಿಶ್), ಜಿನಾಬಕುಲ ೋರ್ಜ್ ಲಿಮಿಟೆಡ್ನ ಬಾಲಚಂದ್ರ ಬದನ, ಹೈಟನ್ ಾಸ್ಟನೆರ್ಸ್ ಲಿಮಿಟೆಡ್ನ ಬಿ. ಸಾಯಿಕುಮಾರ, ಕಾಟ್ಸೀಡ್ಸ್ ಕಾಪೋರ್ರೇಶನ್ನ ಶಾಂತಿಲಾಲ್ ಓಸ್ವಾಲ್, ಪ್ರಾಕ್ಸನ್ಸ್ ಎಕ್ಸಟ್ರಾಕ್ಟ್ಸ ಇಂಡಿಯಾ ಲಿಮಿಟೆಡ್ನ ಪ್ರಕಾಶ ಜೈನ್, ್ರೆಶ್ಗ್ರೀನ್ ಅಗ್ರೋ ಎಕ್ಸಪೋರ್ಟ ಲಿಮಿಟೆಡ್ನ ಕೆ.ವೈ. ಜಾಡರ, ವಾರಿ ಮಾರುತೇಶ್ವರ ಗ್ರಾನೈಟ್ಸ್ನ ಕಮಲಪ್ಪ ಜಾಲಿಹಾಳ, ಎಐಎಸ್ಎಸ್ಇಎಲ್ ಟೆಕ್ನಾಲಜಿಸ್ನ ಪ್ರಸಾದ ಪಾಟೀಲ ಹಾಗೂ ಒಎನ್ವೈಎಕ್ಸ್ ಮೆಟಲ್ ಪ್ರೆಸಿಶನ್ನ ಅನುಪಮಾ ಪ್ರಕಾಶ ಹಿರೇಮಠ ಅವರಿಗೆ ಪ್ರಶಸ್ತಿ ಲಕ ನೀಡಿ ಸತ್ಕರಿಸಲಾಯಿತು.