

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯಗಳನ್ನು ನೀಡಲು ಆಡಳಿತ ಮಂಡಳಿ ತೀರ್ಮಾನಿಸಿ ಅನುಷ್ಠಾನ ಗೊಳಿಸುತ್ತಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಸಪೂರಿ ಹೇಳಿದರು.
ನಗರದ ಸುಭಾಷ್ ರಸ್ತೆಯ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಠೇವಣಾತಿ ಸಂಗ್ರಹ ಮತ್ತು ಸಾಲ ವಿತರಿಸುವ ವಿನೂತನ ಹೊಸಬೆಳಕು ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಠೇವಣಿ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಬ್ಯಾಂಕಿನ ಗ್ರಾಹಕರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲು ಮತ್ತು ಠೇವಣಿಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವುದು ನೂತನ ಯೋಜನೆ ಉದ್ದೇಶ. ಇದಕ್ಕಾಗಿ ಪ್ರತಿ ತಿಂಗಳು 1ನೇ ತಾರೀಖು ಗ್ರಾಹಕರನ್ನು ಬ್ಯಾಂಕಿಗೆ ಆಮಂತ್ರಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜತೆಗೆ ಬ್ಯಾಂಕಿನ ಆರ್ಥಿಕ ವಹಿವಾಟು ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಹೊಸ್ ವರ್ಷದಿಂದ ಬ್ಯಾಂಕಿನ 48 ಶಾಖೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಗ್ರಾಹಕರು ಯೋಜನೆಯ ಲಾಭ ಪಡೆಯಬೇಕು ಎಂದರು.
ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಮುನಿಯಪ್ಪ, ಗ್ರಾಹಕರಾದ ಪ್ರಕಾಶ ಭಾವಿಕಟ್ಟಿ, ಪರಮೇಶ್ವರ ಗರಗ, ಅಧಿಕಾರಿಗಳಾದ ಸಿ.ಎಂ.ಭಾವಿಕಟ್ಟಿ, ಎಂ.ವೈ. ಹೂಗಾರ, ಇತರರು ಇದ್ದರು.
ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ಹುಕ್ಕೇರಿ ನಿರೂಪಿಸಿದರು. ಕೃಷ್ಣಾ ಕಡಕೋಳ ವಂದಿಸಿದರು.