ಮಂಗಳೂರು : ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಸುವರ್ಣ ಮಹೋತ್ಸವ ಜ.9 ರಂದು ನಡೆಯಲಿದ್ದು
ಶಾಸಕ ವೇದವ್ಯಾಸ ಕಾಮತ್ ಬಿಡುಗಡೆಗೊಳಿಸಿದರು.
ಕೊಂಕಣಿ ಭಾಷಾ ಮಂಡಳ್‌ನ ಐವತ್ತು ಐತಿಹಾಸಿಕ ವರ್ಷಗಳ ಪಯಣದ ಸಂಭ್ರಮ ಮಂಗಳೂರು ನಗರದಲ್ಲಿ ಆಚರಣೆ ಆಗುತ್ತಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮುಖ್ಯ ಅತಿಥಿಯಾಗಿದ್ದರು.
ಕೊಂಕಣಿ ಭಾಷಾ ಮಂಡಳ್ ಅಧ್ಯಕ್ಷ ಕೆ.ವಸಂತ ರಾವ್, ಕಾರ್ಯದರ್ಶಿ ರೇಮಂಡ್ ಡಿಕುನಃ, ಖಜಾಂಚಿ ಸುರೇಶ್ ಶೆಣೈ,
ಕಾರ್ಯಕಾರಿ ಸದಸ್ಯ ಡಾ ಅರವಿಂದ ಶಾನ್‌ಬಾಗ್ ಉಪಸ್ಥಿತರಿದ್ದರು.