ಕೆಬಿಎಲ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಆರಂಭ

11
Published on

ಮೈಸೂರು: ನಿವೇಶನಾ ಆಕಾಂಕ್ಷಿಗಳಿಗೆ ಕಡಿಮೆ ದರದಲ್ಲಿ ಎಲ್ಲ ಮೂಲಸೌಕರ್ಯಗಳನ್ನೂ ಒಳಗೊಂಡ ನಿವೇಶನ ನೀಡಬೇಕು ಎನ್ನುವ ಸದುದ್ದೇಶದಿಂದ ಕೆ.ಬಿ.ಎಲ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಲಾಗಿದೆ ಎಂದು ಮುಖ್ಯ ಪ್ರವರ್ತಕರಾದ ಎಲ್.ರವಿ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ತಿಳಿಸಿದರು.

ಕೆ.ಆರ್.ಎಸ್. ರಸ್ತೆಯ ಕೆಬಿಎಲ್ ಸಿಲಿಕಾನ್ ಸಿಟಿ ಬಳಿಯ ಕೆಬಿಎಲ್ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಪೂಜೆ ಸಲ್ಲಿಸುವುದರ ಮೂಲಕ ಷೇರು ಸಂಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರು ಕೇಂದ್ರವಾಗಿಟ್ಟುಕೊಂಡು ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದರ ಷೇರು ಸಂಗ್ರಹಿಸುವ ಕಾರ್ಯ ಪ್ರಾರಂಭವಾಗಿದ್ದು ಫೆಬ್ರವರಿ 28 ಕೊನೆಯ ದಿನವಾಗಿದೆ ಎಂದು ಹೇಳಿದರು.

ಆಸಕ್ತರು ಡಾ.ಈ.ಸಿ.ನಿಂಗರಾಜ್‌ಗೌಡ ಅವರ ಮೊ.ಸಂ: 9980184789 ಸಂಪರ್ಕಿಸಬಹುದಾಗಿದೆ. ಇದರ ಮುಖ್ಯ ಕೇಂದ್ರ ಕಚೇರಿ ಮೈಸೂರಿನ ಗೀತಾ ರಸ್ತೆಯಲ್ಲಿದೆ. ಪ್ರಮುಖರಾದ ಎನ್.ಕಿರಣ್, ಎಂ.ಮೋಹನ್, ಎಂ.ಎಸ್.ಉಮಾಶಂಕರ್ ಆರಾಧ್ಯ, ಮೃತ್ಯುಂಜಯ ರೆಡ್ಡಿ, ರೇಖಾ ಪ್ರದೀಪ್, ಡಿ.ಶ್ರೀಕಂಠೇಗೌಡ, ಬಿ.ಎನ್.ಸುರೇಶ್, ಕೆ.ಎನ್.ಸಂತೋಷ್, ಗೋಪಾಲ್, ಸಿ.ಎಂ.ಮಂಜುನಾಥ್, ಚಂದ್ರಶೇಖರ್, ಲಕ್ಷ್ಮೀಕಾಂತ್, ಪುಟ್ಟಸ್ವಾಮಿಗೌಡ, ರವಿ, ವೆಂಕಟೇಶ್, ನೀತಿನ್‌ಕುಮಾರ್, ದಿಲೀಪ್ ಆರಾಧ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net