ಕಾಮಗಾರಿ ಬಿಲ್ ಬಿಡುಗಡೆ ಮಾಡಲಿ

dvd-1
ಬೆಂಗಳೂರಿನಲ್ಲಿ ಕೆಬಿಜೆಜೆಎನ್‌ಎಲ್ ಎಂಡಿ ಕೆ.ಪಿ.ಮೋಹನ್‌ರಾಜ್‌ಗೆ ದೇವದುರ್ಗ ತಾಲೂಕು ಕಂಟ್ರಾಕ್ಟರ್ಸ್‌ ಅಸೋಸಿಯೇಷನ್ ಹಾಗೂ ಎಸ್ಸಿ, ಎಸ್ಟಿ ಕಂಟ್ರಾಕ್ಟರ್ ಅಸೋಸಿಯೇಷನ್ ಮನವಿ ಸಲ್ಲಿಸಿದವು. ಪ್ರಮುಖರಾದ ಮಹಾದೇವಪ್ಪ ಗೌಡ ಚಿಕ್ಕಬೂದೂರು, ಮುದ್ದುರಂಗಪ್ಪ, ಮಹಮ್ಮದ್ ಅಬ್ದುಲ್ ಅಸ್ಲಾಂ, ಮಹೇಶ ಅಕ್ಕರಕಿ, ಭೀಮನಗೌಡ ಜಾಗಟಗಲ್, ಗುರುನಾಥ ಇದ್ದರು.
Published on

ದೇವದುರ್ಗ: ನಾರಾಯಣಪುರ ಬಲದಂಡೆ ಉಪಕಾಲುವೆ, ಸೀಳುಗಾಲುವೆಯಲ್ಲಿ ವಿವಿಧ ಕಾಮಗಾರಿ ಮಾಡಿದ ಸಣ್ಣಪುಟ್ಟ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಕೆಬಿಜೆಎಲ್‌ಎಲ್ ಎಂಡಿ ಕೆ.ಪಿ.ಮೋಹನ್‌ರಾಜ್‌ಗೆ ದೇವದುರ್ಗ ತಾಲೂಕು ಕಂಟ್ರಾಕ್ಟರ್ಸ್‌ ಅಸೋಸಿಯೇಷನ್ ಹಾಗೂ ಎಸ್ಸಿ, ಎಸ್ಟಿ ಕಂಟ್ರಾಕ್ಟರ್ ಅಸೋಸಿಯೇಷನ್ ಗುರುವಾರ ಜಂಟಿಯಾಗಿ ಮನವಿ ಸಲ್ಲಿಸಿದವು.

ತಾಲೂಕಿನ ಸಣ್ಣಪುಟ್ಟ ಗುತ್ತಿಗೆದಾರರು 2022-23ನೇ ಸಾಲಿನಲ್ಲಿ ನಾರಾಯಣಪುರ ಬಲದಂಡೆ ನಾಲೆ, ಉಪಕಾಲುವೆಯಲ್ಲಿ ಜಂಗಲ್ ಕಟಿಂಗ್, ಹೂಳು ತೆರವು, ಸಣ್ಣಪುಟ್ಟ ಸಿಸಿ ಕಾಮಗಾರಿ ಮಾಡಿದ್ದಾರೆ. ಕೆಲಸ ಪೂರ್ಣಗೊಳಿಸಿ ಮೂರು ವರ್ಷ ಕಳೆದರೂ ಬಿಲ್ ಬಿಡುಗಡೆ ಮಾಡಿಲ್ಲ.

ಬಹುತೇಕ ಗುತ್ತಿಗೆದಾರರು ಬಡವರಿದ್ದು, ಎಸ್ಸಿ, ಎಸ್ಟಿ ವರ್ಗಕ್ಕೆ ಸೇರಿದ್ದಾರೆ. ಹಲವರು ಮನೆ, ವಾಹನ, ಆಸ್ತಿ ಅಡವಿಟ್ಟು ಸಾಲ ಪಡೆದು ಕೆಲಸ ಮಾಡಿದ್ದಾರೆ. ಬಿಲ್ ಆಗದ ಕಾರಣ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಸಾಲಗಾರರು ಮನೆವರೆಗೆ ಬಂದು ಬಡ್ಡಿ, ಗಂಟು ಕೇಳುತ್ತಿದ್ದಾರೆ.

ಅಲ್ಲದೆ, ಹಲವರು ಅಡವಿಟ್ಟ ವಸ್ತುಗಳು ಜಪ್ತಿಯಾಗುವ ಹಂತಕ್ಕೆ ಬಂದಿವೆ ಎಂದು ನೋವು ತೋಡಿಕೊಂಡಿದ್ದು, ಕೂಡಲೇ 2022-23ನೇ ಸಾಲಿನಲ್ಲಿ ಕಾಮಗಾರಿ ಮಾಡಿದ ಎಲ್ಲ ಗುತ್ತಿಗೆದಾರರ ಅನುದಾನ ಬಿಡುಗಡೆ ಮಾಡಬೇಕು. ತಾಲೂಕಿನ ಎ1, ಎ2, ಎ3 ಸೇರಿ ಗುತ್ತಿಗೆದಾರರ ಬಿಲ್ ಬಾಕಿಯನ್ನು ತಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ತಾಲೂಕು ಅಧ್ಯಕ್ಷ ಮಹಾದೇವಪ್ಪ ಗೌಡ ಚಿಕ್ಕಬೂದೂರು, ಉಪಾಧ್ಯಕ್ಷ ಮುದ್ದುರಂಗಪ್ಪ, ಮಹಮ್ಮದ್ ಅಬ್ದುಲ್ ಅಸ್ಲಾಂ, ಮಹೇಶ ಅಕ್ಕರಕಿ, ಭೀಮನಗೌಡ ಜಾಗಟಗಲ್, ಗುರುನಾಥ ರೆಡ್ಡಿ ಜೋಳದಹೆಡಗಿ, ಭೂತಪ್ಪ ದೇವರಮನಿ, ಶಿವನಗೌಡ ಕಕ್ಕಲದೊಡ್ಡಿ, ವೆಂಕಟರೆಡ್ಡಿ ಜೋಳದಹೆಡಗಿ, ಅಸ್ಲಾಂ, ಮಹಾದೇವಪ್ಪ ಗೌಡ, ವೆಂಕಟೇಶ ಬಿ.ಆರ್.ಗುಂಡಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net