

ಮದ್ದೂರು: ಪಟ್ಟಣದ ಭೂ ಅಭಿವೃದ್ಧಿ ಬ್ಯಾಂಕ್ (ಪಿ ಕಾರ್ಡ್ ಬ್ಯಾಂಕ್) ಅಧ್ಯಕ್ಷರಾಗಿ ಕುದರಗುಂಡಿ ಕೆ.ಬಿ.ಸಿದ್ದೇಗೌಡ ಅವಿರೋಧ ಆಯ್ಕೆಯಾದರು.
ಸಿ.ಎನ್.ಕೆಂಪೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಕೆ.ಬಿ.ಸಿದ್ದೇಗೌಡ ಅವರನ್ನು ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಧರಣೇಶ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಕೆ.ಬಿ.ಸಿದ್ದೇಗೌಡ ಮಾತನಾಡಿ, ನಾನು ಅಧ್ಯಕ್ಷನಾಗಲು ಎಲ್ಲ ಪಕ್ಷದವರು ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಬ್ಯಾಂಕ್‌ನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಷೇರುದಾರರಿಗೆ ಮತ್ತು ರೈತರಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಬ್ಯಾಂಕ್ ಉಪಾಧ್ಯಕ್ಷ ಮಾದಪುರದೊಡ್ಡಿ ಕೃಷ್ಣಪ್ಪ, ನಿರ್ದೇಶಕರಾದ ಕೆ.ಎಂ.ಕೃಷ್ಣೇಗೌಡ, ಈರೇಗೌಡನದೊಡ್ಡಿ ಮುತ್ತುರಾಜು, ದೇಶಹಳ್ಳಿ ಡಿ.ಸಿ.ಮಹದೇವಯ್ಯ, ಬಿದರಹಳ್ಳಿ ಬಿ.ಎಸ್.ಮಧು, ಮಲ್ಲನಾಯಕನಹಳ್ಳಿ ಎಂ.ಎಸ್.ಸಿದ್ದಮರಿ, ಮಡೇನಹಳ್ಳಿ ಸಿದ್ದರಾಮು, ಮುಟ್ಟನಹಳ್ಳಿ ಈರೇಗೌಡ, ಕದಲೂರು ಎಂ.ಸವಿತಾ, ಮಾರಸಿಂಗನಹಳ್ಳಿ ಗೌರಮ್ಮ, ತರಿಕೆರೆ ಟಿ.ಎಂ.ರಾಜಶೇಖರ್, ಮುಖಂಡರಾದ ವಳಗೆರೆಹಳ್ಳಿ ಗಿರೀಶ್, ರವಿ ಚನ್ನಸಂದ್ರ, ನಗರಕೆರೆ ಸಂದೀಪ್, ಕೆಂಗಲ್‌ಗೌಡ, ಬ್ಯಾಡರಹಳ್ಳಿ ರಾಮಕೃಷ್ಣ ಇದ್ದರು.