ಹೆಣ್ಣು ಮತ್ತು ಗಂಡಿನ ನಡುವಿನ ಅನುಪಾತ ಸಮಗೊಳಿಸಿ

web 3
Published on

ಚಿಕ್ಕಮಗಳೂರು: ಗಂಡು ಮಗು ಬೇಕು ಎನ್ನುವ ಪಾಲಕರ ಹಂಬಲ ಹಾಗೂ ಮೂಢನಂಬಿಕೆಗಳು ಹೆಣ್ಣು ಶಿಶು ಹತ್ಯೆಗೆ ಕಾರಣವಾಗಿದೆ ಎಂದು ಜಿಪಂ ಸಿಇಒ ಎಸ್.ಪೂವಿತಾ ಹೇಳಿದರು.

ಜಿಪಂ ಮಿನಿ ಸಭಾಂಗಣದಲ್ಲಿ ಶುಕ್ರವಾರ ಸಿಪಿ ಮತ್ತು ಪಿಎನ್​ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಿಪಿ ಮತ್ತು ಪಿಎನ್​ಡಿಟಿ ಕಾಯ್ದೆಯನ್ನು ಸಮರ್ಪಕ ಅನುಷ್ಠಾನದ ಜತೆಗೆ ಹೆಣ್ಣು ಮಕ್ಕಳ ಅನುಪಾತ ಹೆಚ್ಚಿಸಿ ಹೆಣ್ಣು ಮತ್ತು ಗಂಡಿನ ನಡುವಿನ ಅನುಪಾತ ಸಮಗೊಳಿಸಬೇಕು ಎಂದರು.

ಜಿಲ್ಲೆಯ ಸ್ಕ್ಯಾನಿಂಗ್ ಕೇಂದ್ರಗಳಿಗೆ ಸಮಿತಿ ಸದಸ್ಯರು ಅನಿರೀಕ್ಷಿತ ಭೇಟಿ ನೀಡಿ ಅವುಗಳ ನಿರ್ವಹಣೆ ಮತ್ತು ತಪಾಸಣೆ ಮಾಡಿ ಅಕ್ರಮ ತಡೆಯಬೇಕು. ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಸೇರಿ 53 ಸ್ಕ್ಯಾನಿಂಗ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಸ್ಕ್ಯಾನಿಂಗ್ ಕೇಂದ್ರಗಳು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದರು.

ಸ್ಕ್ಯಾನಿಂಗ್ ಕೇಂದ್ರಗಳು ನೋಂದಾಯಿತ ವೃತ್ತಿಪರರು ಕಾಯ್ದೆಗಳ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಅವುಗಳ ನೋಂದಣಿ ಅಮಾನತಿನಲ್ಲಿಡಲಾಗುವುದು. ಪ್ರಸವಪೂರ್ವ ಪರೀಕ್ಷೆಯನ್ನು ವರ್ಣತಂತುಗಳ ವೈಪರೀತ್ಯ, ಜನಟಿಕ್ ಮೆಟೋಪಾಲಿಸ್ ಡಿಸಿಸ್ ಸೇರಿದಂತೆ ಮತ್ತಿತರ ಕಾಯಿಲೆಗಳನ್ನು ಗುರುತಿಸಲು ಸೀಮಿತವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net