

ಕಲಘಟಗಿ: ಹನ್ನೆರಡನೇ ಶತಮಾನದಲ್ಲಿ ಪಶು, ಪಕ್ಷಿ, ಪ್ರಾಣಿ ಹಾಗೂ ಜನರ ಬಾಯಾರಿಕೆ ನೀಗಿಸುವ ಕನಸು ಹೊತ್ತು ಅನೇಕ ಸ್ಥಳಗಳಲ್ಲಿ ಕೆರೆಕಟ್ಟೆಗಳನ್ನು ಕಟ್ಟಿದ ಶರಣ ಕಾಯಕಯೋಗಿ ಶ್ರೀ ಸಿದ್ಧರಾಮ ಶಿವಯೋಗಿಗಳನ್ನು ನಾವು ಇಂದಿಗೂ ಶ್ರಮಿಸಬೇಕು ಎಂದು ಭೋವಿ ಸಮಾಜದ ತಾಲೂಕಾಧ್ಯಕ್ಷ ನರೇಶ ಮಲೆನಾಡು ಹೇಳಿದರು.
ಪಟ್ಟಣದ ಭೋವಿ ಓಣಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಭೋವಿ ಸಮಾಜದವರು ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಬಸವಣ್ಣನವರ ಸಮಕಾಲೀನರಾದ ಶ್ರೀ ಸಿದ್ಧರಾಮೇಶ್ವರರು ಅಲ್ಲಮ ಪ್ರಭುಗಳಿಂದ ಲಿಂಗದೀಕ್ಷೆ ಪಡೆದು ಸಮಾಜದ ಏಳಿಗೆಗೆ ಶ್ರಮಿಸುತ್ತ ಶಿವಶರಣರಿಂದೊಡಗೂಡಿ ಶರಣತತ್ವಗಳನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ ಎಂದರು.
ಪರಶುರಾಮ ಬಂಡಿವಡ್ಡರ, ನಾಗರಾಜ ವಡ್ಡರ, ಮಂಜುನಾಥ ಮಾಳಗಿಮನಿ, ಮಲ್ಲಪ್ಪ ಪೂಜಾರ, ಬಸಣ್ಣ ಹಳ್ಳಿಗೇರಿ, ರಾಮು ತಿಪ್ಪಣ್ಣವರ, ಶಿವಾನಂದ ಬಂಕಾಪುರ, ಸಂತೋಷ ಮಾಳಗಿಮನಿ, ನಾಗರಾಜ ಕೂಡಲಗಿ, ರಾಮು ಮಲಕನಕೊಪ್ಪ, ಸೋಮಣ್ಣ ಬಾಗಲಕೋಟ, ಪರಶುರಾಮ ಹಿರೇಹೊನ್ನಿಹಳ್ಳಿ, ಶಿವಾನಂದ ಗಂಜಿಗಟ್ಟಿ, ಸಂತೋಷ ಗಂಜಿಗಟ್ಟಿ, ಇತರರಿದ್ದರು.