

ದೇವದುರ್ಗ: ಬಸವಾದಿ ಶರಣರ ಕಾಯಕ-ದಾಸೋಹ ಹಾಗೂ ಭಕ್ತಿ ಮಾರ್ಗವನ್ನು ಎಲ್ಲರೂ ಅನುಸರಿಸಬೇಕು ಎಂದು ಹೂಗಾರ ಸಮುದಾಯದ ತಾಲೂಕು ಅಧ್ಯಕ್ಷ ಶಂಕರ್ ಹೂಗಾರ್ ಕಕ್ಕಲದೊಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೂಗಾರ ಸಮಾಜದಿಂದ ಆಯೋಜಿಸಿದ್ದ ಕಾಯಕಯೋಗಿ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಭಾನುವಾರ ಮಾತನಾಡಿದರು. ಶರಣ ಹೂಗಾರ ಮಾದಯ್ಯ ಕಾಯಕಯೋಗಿ ಎಂದೇ ಹೆಸರು ಪಡೆದವರು. ಶರಣರ ಲಿಂಗಪೂಜೆಗೆ ಹೂವುಗಳನ್ನು ಜೋಡಿಸಿಕೊಡುವ ಜತೆಗೆ ಕಾಯಕದ ತತ್ವ ಸಾರಿದ್ದಾರೆ. ಹೂಗಾರ ಮಾದಯ್ಯ ಅನೇಕ ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ದಾರಿದೀಪ ತೋರಿದ್ದಾರೆ ಎಂದರು.\
ಪ್ರಮುಖರಾದ ಹನುಮಂತರಾಯ ಹೂಗಾರ್ ಜೋಳದಹೆಡಗಿ, ಬಸವ ಹೂಗಾರ್, ಸಲಿಕ್ಯಾಪುರ, ನಿಜಪ್ಪ ಹೂಗಾರ್, ಜಯಂತ್ ಹೂಗಾರ್, ಬಸಪ್ಪ ಹೂಗಾರ್, ಶರಣಪ್ಪ ಹೂಗಾರ್ ನಗರಗುಂಡ, ವಿಜಯ್ ಹೂಗಾರ್, ಯಮನಪ್ಪ ಹೂಗಾರ್ ಇದ್ದರು.