ಕಟ್ಟೇಗೌಡರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ

KATTEGOWDA PRASHSTI
Published on

ಹಾನಗಲ್ಲ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡಮಾಡುವ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಉದ್ಯಮಿ ರಾಜಶೇಖರಗೌಡ ಕಟ್ಟೇಗೌಡ್ರ ಭಾಜನರಾಗಿದ್ದಾರೆ.

ಭಾನುವಾರ ದೊಡ್ಡಬಳ್ಳಾಪುರದ ಕೆಎಂಎಚ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಕಟ್ಟೇಗೌಡ್ರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮುಂಡರಗಿಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಇಂದುಮತಿ ಸಾಲಿಮಠ, ಉಪಾಧ್ಯಕ್ಷ ಡಾ.ಅಂಜಿನಪ್ಪ, ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಎಸ್.ಕೆ. ಉಮೇಶ, ಗಂಗಾಂಬಿಕಾ ಪಾಟೀಲ, ವಿ.ಟಿ. ಸ್ವಾಮಿ, ಬಾಬುರಾವ್ ದಾನಿ, ಎಚ್.ವಿ. ಚಿಕ್ಕಹನುಮಂತೇಗೌಡ, ಕಾರ್ಯಕ್ರಮ ಸಂಯೋಜಕ ಕೆ.ಪಿ. ಲಕ್ಷ್ಮೀನಾರಾಯಣ, ಹಾವೇರಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕೊಂಚಿಗೇರಿ, ತಾಲೂಕು ಅಧ್ಯಕ್ಷ ಗುರುನಂಜನಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net