ನುಡಿದಂತೆ ನಡೆದ ಶ್ರೇಷ್ಠ ಕಾಯಕ ಜೀವಿ; ಉಪನ್ಯಾಸಕ ರಾಮಚಂದ್ರ ಬಡಿಗೇರ

HNMR CHANDIYA
ಹನುಮಸಾಗರ ಸಮೀಪದ ಯರಗೇರಾ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಜಿಗೆರಿ ಮಠದ ಸಿದ್ಧೇಶ್ವರ ಸ್ವಾಮೀಜಿ, ಉಪನ್ಯಾಸಕರಾದ ಶರಣಪ್ಪ ಮಡಿಕೇರಿ, ರಾಮಚಂದ್ರ ಬಡಿಗೇರ, ಮುಖಂಡರಾದ ಶರಣಯ್ಯ ಹಿರೇಮಠ, ರಮೇಶ ಭಜಂತ್ರಿ, ಧರ್ಮಣ್ಣ ಗಡಾದ, ಗಂಗಣ್ಣಸೂಡಿ, ಮಹೇಶ ನೆರತೆಲಿ, ಉಮೇಶ ರಾಠೊಡ, ಮುತ್ತಣ್ಣ ಯರಗೇರಾ, ರವಿ ಭಜಂತ್ರಿ ಇತರರಿದ್ದರು.
Published on

ಹನುಮಸಾಗರ: ನುಲಿಯ ಚಂದಯ್ಯ ಅವರ ಕಾಯಕ ತತ್ವ ಒಂದು ಜನಾಂಗಕ್ಕೆ ಸಿಮೀತವಾಗಿಲ್ಲ. ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ರಾಮಚಂದ್ರ ಬಡಿಗೇರ ಹೇಳಿದರು.

ಸಮೀಪದ ಯರಗೇರಾ ಗ್ರಾಮದಲ್ಲಿ ಗುರುವಾರ ಕೊರವ ಭಜಂತ್ರಿ ಸಮುದಾಯದಿಂದ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿಯಲ್ಲಿ ಉಪನ್ಯಾಸ ನೀಡಿದರು. ಚಂದಯ್ಯ ಅವರು ಸಾಮಾಜಿಕ ಪರಿವರ್ತನೆಗಾಗಿ ಕೆಲಸ ಮಾಡಿದವರು. ನುಡಿದಂತೆ ನಡೆದ ಶ್ರೇಷ್ಠ ಕಾಯಕ ಜೀವಿ. ಇವರ ಜೀವನಾದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ನುಲಿಯ ಚಂದಯ್ಯ ನಿತ್ಯ ಹಳ್ಳಕ್ಕೆ ಹೋಗಿ ಹುಲ್ಲನ್ನು ಕೊಯ್ದು ತಂದು ಹಗ್ಗವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ತಮ್ಮ ಜೀವನ ನಡೆಸುವುದರ ಜತೆಗೆ ದಾಸೋಹ ಮಾಡುತ್ತಿದ್ದರು. ಸಮ ಸಮಾಜ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ಚಂದಯ್ಯ ಶ್ರಮಿಸಿದ್ದಾರೆ ಎಂದರು.

ಜಿಗೆರಿ ಮಠದ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪನ್ಯಾಸಕ ಶರಣಪ್ಪ ಮಡಿಕೇರಿ ಉಪನ್ಯಾಸ ನೀಡಿದರು. ಪ್ರಮುಖರಾದ ಶರಣಯ್ಯ ಹಿರೇಮಠ, ರಮೇಶ ಭಜಂತ್ರಿ, ಧರ್ಮಣ್ಣ ಗಡಾದ, ಗಂಗಣ್ಣಸೂಡಿ, ಮಹೇಶ ನೆರತೆಲಿ, ಉಮೇಶ ರಾಠೊಡ, ಮುತ್ತಣ್ಣ ಯರಗೇರಾ, ರವಿ ಭಜಂತ್ರಿ ಇತರರಿದ್ದರು.

ಗ್ರಾಪಂ ಅಧ್ಯಕ್ಷ ಬಸವರಾಜ ಶೆಟ್ಟರ್, ಬಸವರಾಜ ಮೆಟಿ, ನುಲಿಯ ಚಂದಯ್ಯ ಭಾವಚಿತ್ರ ಮೆರವಣಿಗೆ ಚಾಲನೆ ನೀಡಿದರು. ಕುಂಭ, ಕಳಸ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net