ಕಾಯಕ ನಿಷ್ಠೆಯಿಂದ ವಿಮುಖರಾಗದಿರಿ:ಉಪನ್ಯಾಸಕ ಟಿ.ಎಂ.ಪ್ರಭುಸ್ವಾಮಿ ಸಲಹೆ

kmp
ಕಂಪ್ಲಿಯ ಗುರುಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 228ನೇ ಶಿವಾನುಭವ ಕಾರ್ಯಕ್ರಮದಲ್ಲಿ ಉಪನ್ಯಾಸಕ ಟಿ.ಎಂ.ಪ್ರಭುಸ್ವಾಮಿ ಮಾತನಾಡಿದರು. ಪ್ರಮುಖರಾದ ಡಾ.ಮೃತ್ಯುಂಜಯ ರುಮಾಲೆ, ಎಚ್.ಎಂ.ಶರಣಬಸವರಾಜ
Published on

ಕಂಪ್ಲಿ: ಸಂಪತ್ತು ಜಡತ್ವ ಹೊಂದದೆ ಸದಾ ಚಲನಶೀಲವಾಗಿರಬೇಕೆಂಬ ಬಸವಣ್ಣನ ಆರ್ಥಿಕ ಚಿಂತನೆ ಆದರ್ಶವಾಗಿದೆ ಎಂದು ವಿಜಯನಗರ ಪಿಯು ಕಾಲೀಜಿನ ಉಪನ್ಯಾಸಕ ಟಿ.ಎಂ.ಪ್ರಭುಸ್ವಾಮಿ ಹೇಳಿದರು.


ಪಟ್ಟಣದ ಗುರುಮಠದಲ್ಲಿ ಲಿಂ.ಓದ್ಸೋ ಕರಿಬಸಯ್ಯ ಶಿವಾನಂದಾಶ್ರಮದಿಂದ ನೂಲ ಹುಣ್ಣಿಮೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ 228ನೇ ಶಿವಾನುಭವ ಹಾಗೂ ಲಿಂ.ಗೊಗ್ಗ ವಿಜಯಲಕ್ಷ್ಮೀ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ರಾಜ್ಯ, ರಾಷ್ಟ್ರದ ಆರ್ಥಿಕತೆಗೆ ಜನರ ತಲಾ ಆದಾಯ ಪ್ರಾಮುಖ್ಯತೆಯಾಗುತ್ತದೆ. ಪ್ರಸ್ತುತ ಸರ್ಕಾರ ನೀಡುವ ಉಚಿತ ಗ್ಯಾರಂಟಿಗಳಿಂದ ಜನತೆ ಕಾಯಕ ಕ್ರಿಯಾಶೀಲತೆಯಿಂದ ವಿಮುಖರಾಗುವ ಸಾಧ್ಯತೆ ಇದೆ ಎಂದರು.


ಸಹಾಯಕ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಮಾತನಾಡಿ, ಕಾಯಕ, ದಾಸೋಹ ನಿಷ್ಠೆಯೊಂದಿಗೆ ಜನತೆಯಲ್ಲಿ ಶಿವಾನುಭವ ಜಾಗೃತಿ ಮೂಡಿಸುವಲ್ಲಿ ಕರಿಬಸಯ್ಯ ಶಿವಾನಂದಾಶ್ರಮ ಮಹತ್ವದ ಪಾತ್ರವಹಿಸಿದೆ ಎಂದರು.


ಶಿವಾನಂದಾಶ್ರಮದ ಟ್ರಸ್ಟಿ ಗೊಗ್ಗ ಚನ್ನಬಸವರಾಜ, ಗೊಗ್ಗ ಬಸವಕುಮಾರ್, ಪ್ರಮುಖರಾದ ಅಯೋಧ್ಯೆಯ ಚ್.ಎಂ.ಶರಣಬಸವರಾಜಸ್ವಾಮಿ, ಘನಮಠದಯ್ಯ ಹಿರೇಮಠ, ಎಸ್.ಎಸ್.ಎಂ.ಚನ್ನಬಸವರಾಜ, ಕೆ.ಎಂ.ಹೇಮಯ್ಯಸ್ವಾಮಿ, ಸಂತೋಷ ಕೊಟ್ರಪ್ಪ ಸೋಗಿ, ದಾನಶೆಟ್ಟಿ ಶಿವನಾಗಪ್ಪ, ಬಿ.ಹುಸೇನಸಾಬ್, ಎಚ್.ಎಂ.ಜಡೆಯ್ಯಸ್ವಾಮಿ, ಕೆ.ಎಂ.ಚಂದ್ರಶೇಖರಸ್ವಾಮಿ, ವೈ.ಯೋಗರಾಜ, ಅಕ್ಕಮಹಾದೇವಿ ಮಹಿಳಾ ಮಂಡಳಿಯವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net