

ನಂದೇಶ್ವರ: ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಎಲ್ಲ ಸಂತ, ಮಹಾಂತ ಹಾಗೂ ಶರಣರ ಮೂಲ ಧ್ಯೇಯ ಕಾಯಕ ದಾಸೋಹವಾಗಿದೆ ಎಂದು ಕವಲಗುಡ್ಡ ಸಿದ್ದಸಂಸ್ಥಾನ ಮಠದ ಶ್ರೀಅಮರೇಶ್ವರ ಮಹಾರಾಜರು ಹೇಳಿದರು.
ಸಮೀಪದ ಸತ್ತಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ಹಾಗೂ ಕಳಸಾರೋಹಣ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ರೂಢಿಸುವುದು ಅಗತ್ಯವಾಗಿದೆ. ಮಠ-ಮಂದಿರಗಳಲ್ಲಿ ಆಯೋಜಿಸುವ ಮಹಾತ್ಮರ ಪ್ರವಚನ ಆಲಿಸುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖಂಡ ದಾದಾಗೌಡ ಪಾಟೀಲ, ಸಿದ್ದಯ್ಯ ಹಿರೇಮಠ, ಶ್ರೀಶೈಲ ಜಗಪ್ಪನವರ, ಶಿವನಗೌಡ ಶೂರ್ಪಾಲಿ ಇತರರಿದ್ದರು. ಆನಂದಕುಮಾರ ಪಾಟೀಲ ನಿರೂಪಿಸಿದರು. ಬಸವರಾಜ ಮಡಿವಾಳ ವಂದಿಸಿದರು.