ಕಾಯಕ ಪ್ರಜ್ಞೆ ಬೆಳೆಸಿಕೊಳ್ಳಲಿ

12ITAG1
Published on

ಇಟಗಿ: ಯುವಜನತೆಯಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆ ಮತ್ತು ಸಮಾಜ ಕಲ್ಯಾಣ ಕಾರ್ಯಗಳ ಕುರಿತು ಅರಿವು ಮೂಡಿಸುವುದಕ್ಕಾಗಿ ಅವರ ಜಯಂತಿಯನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ ಎಂದು ಬೆಲಹೊಂಗಲ ಎಪಿಎಂಸಿ ಮಾಜಿ ಸದಸ್ಯ ದುಂಡಪ್ಪ ಕ್ಯಾಸಗೇರಿ ಹೇಳಿದರು.

ಸಮೀಪದ ಬೆಲೂರು ಗ್ರಾಮದ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಸಾಂಸತಿಕ ಬಳಗದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರು ಜೀವನೋಪಾಯಕ್ಕಾಗಿ ಕಾಯಕ ಪ್ರಜ್ಞೆ ಬೆಳೆಸಿಕೊಂಡು ಸ್ವಾವಲಂಬಿ ಬದುಕು ಸಾಗಿಸಬೇಕು ಎಂದರು.

ಗ್ರಾಪಂ ಸದಸ್ಯ ಸಂಗಮೇಶ ಹಿರೇಮಠ, ಆಧ್ಯಾತ್ಮಿಕ ಚಿಂತಕ ಮಂಜು ಅಂಕಲಗಿ, ನಾಗೇಶ ಬೆಣ್ಣಿ, ಶಿಕ ವಿವೇಕ ಕುರಗುಂದ, ಶಿವಲಿಂಗಯ್ಯ ಹಿರೇಮಠ ಮಾತನಾಡಿದರು. ರವಿ ಅಗ್ನಿಹೋತ್ರಿ, ಶಂಕರ ಪತ್ತಾರ, ಗಂಗಾಧರ ಹನುಮಸಾಗರ, ಈರಪ್ಪ ಶಿಂಧೊಳ್ಳಿ, ಪುಲಕೇಶಿ ಗಿರಿಯಾಲ, ಬಾಬು ಕಾಪೋಲಿ, ಮಂಜುನಾಥ ಗುಪ್ಪಿತರ, ಶಂಕರಗೌಡ ಪಾಟೀಲ, ಶಿವಾನಂದ ಕಾಪೋಲಿ, ರಾಜು ಜೋಡಂಗಿ, ವಿಜಯ ನೇಗಿನಹಾಳ, ರಾಚಯ್ಯ ಕೆಂಜಡಿಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net