

ತಲ್ಲೂರ: ಸಮಸಮಾಜಕ್ಕೆ ಬಸವಣ್ಣ ಅವರ ಕೊಡುಗೆ ಅಪಾರವಾಗಿದ್ದು, ಅವರ ಕಾಯಕ ತತ್ತ್ವ ವಿಶ್ವಕ್ಕೆ ಮಾದರಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಕವಿತಾ ಬಾಲರಡ್ಡಿ ಹೇಳಿದರು.
ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.
ಪಿಡಿಒ ಎಚ್.ಕೆ. ಚೌರಡ್ಡಿ, ಸತೀಶ ಬಡಿಗೇರ, ಸದಸ್ಯ ಚನ್ನಯ್ಯ ಪೂಜೇರ, ಮಾಳೈನವರ, ಶಶಿಕಲಾ ಮುನವಳ್ಳಿ, ಸಿ.ಎ.ಮುರಗೋಡ, ರಾಜಶೇಖರ ಅಣ್ಣಿಗೇರಿ, ವಿಠ್ಠಲ ಬಡಿಗೇರ, ಮಹೇಶ ಇಟ್ನಾಳ, ಯಲ್ಲಪ್ಪ ಕಾಮನ್ನವರ, ವಿಜಯಲಕ್ಷ್ಮೀ ಬಡಿಗೇರ, ಶಾಂತವ್ವ ಹಿರೇಮಠ, ಹುಸೇನಬಿ ಕುದರಿ, ಸುಜಾತಾ ಬೆನಕಟ್ಟಿ, ಯಶೋದಾ ಕಾಶಪ್ಪನ್ನವರ, ಲಕ್ಷ್ಮೀ ಪಾಟೀಲ ಇತರರಿದ್ದರು.