ಹಲವು ಭಾಷೆಯಿಂದಾಗಿ ಇಂಗ್ಲೀಷ್ ಬೆಳವಣಿಗೆ: ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿಕೆ

Kavyavaloka lecture programme mandya
Published on

ಮಂಡ್ಯ: ಅನೇಕ ಭಾಷೆಗಳಿಂದಾಗಿ ಇಂಗೀಷ್ ಬೆಳೆದಿದೆ ಎಂದು ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ನಗರದ ಹೊರವಲಯದ ಜ್ಞಾನಸಾಗರ ಕ್ಯಾಂಪಪ್‌ನ ಎಸ್‌ಟಿಎಸ್ ಸಭಾಂಗಣದಲ್ಲಿ ಲೇಖಕಿಯರ ಸಂಘ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕವಿ- ಕಾವ್ಯಾವಲೋಕನ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಗ್ಲೀಷ್ ಹಾಗೂ ಕನ್ನಡ ಸಮ್ಮಿಶ್ರಣ ಮಾತನಾಡುವುದು ಭಾಷಾ ಬೆಳವಣಿಗೆಗೆ ಸೂಕ್ತವಲ್ಲ ಎಂದು ಹೇಳಿದರು.

ಪ್ರಪಂಚದಲ್ಲಿ ಸುಮಾರು ಆರು ಸಾವಿರ ಭಾಷೆಗಳಿವೆ. ನಾಡು, ನುಡಿ ಮೇಲೆ ಅನೇಕ ಆಕ್ರಮಣ ನಡೆದಿದೆ. ಇದನ್ನು ತಡೆಯಲು ಕನ್ನಡ ಚಳವಳಿ ನಡೆದವು. ಭಾಷೆ ಆಧಾರದ ಮೇಲೆ ನಡೆದು ಕನ್ನಡ ನಾಡು ಏಕೀಕರಣ ಆಗಿದೆ. ಕನ್ನಡಕ್ಕಾಗಿ ಕವಿಗಳು ಹೋರಾಟ ನಡೆಸಿ ಭಾಷೆ ಉಳಿವಿಗೆ ಶ್ರಮಿಸಿದ್ದಾರೆ. ಶಿಕ್ಷಣದಿಂದ ವ್ಯಕ್ತಿತ್ವ ರೂಪುಗೊಳ್ಳಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಸಾಹಿತ್ಯ ಅಭ್ಯಾಸ, ಪಠ್ಯಪುಸ್ತಕವನ್ನು ಓದುವುದರಿಂದ ಭಾವನೆಗಳ ಶುದ್ಧೀಕರಣಗೊಳಿಸುತ್ತದೆ ಎಂದರು.

ಇಂಡುವಾಳು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಡಾ.ಎಸ್.ಸಿ.ಮಂಗಳಾ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಸಾಹಿತಿಗಳ ಸ್ಪೂರ್ತಿ ಪಡೆಯಬೇಕು. ನಾವು ಕೂಡ ಸಾಧನೆ ಮಾಡಲು ಪ್ರಯತ್ನ ಪಡಬೇಕು. ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದರು.

ಶಿಕ್ಷಕ ಕೊತ್ತತ್ತಿ ರಾಜು ಅವರು ಕಡಿಕೊಳ್ಳ ಮಡಿವಾಳಪ್ಪ ಮತ್ತು ಸಂತ ಶಿಶುನಾಳ ಶರೀಫರ ತತ್ವಪದ ಹಾಗೂ ಹಿಂದೂಮತಿ ಲಮಾಣಿಯವರ ’ನನ್ನಾಸೆ ’ಎಂಬ ಕವನ ವಿಷಯ ಕುರಿತು ವಿಷಯ ಮಂಡನೆ ಮಾಡಿದರು. ಗೀತಾಂಜಲಿ ಅಂತಾರಾಷ್ಟ್ರೀಯ ಶಾಲೆಯ ಪ್ರಾಂಶುಪಾಲೆ ಎಚ್.ಸರೋಜಾ, ಸಂಘದ ನಿರ್ದೇಶಕಿಯರಾದ ಎ.ಎನ್.ಶರ್ಮಿಳಾ, ಡಿ.ಶಿಲ್ಪಾ, ಆಶಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net