

ಕುಶಾಲನಗರ:
ಇಂದಿನ ಬಹುತೇಕ ಕವಿಗಳಿಗೆ ಕವನ ಬರೆಯುವುದೇ ಗೊತ್ತಿಲ್ಲ. ಗೊತ್ತಿದ್ದರೂ ಕಾವ್ಯಾಸಕ್ತರ ಹೃದಯಕ್ಕೆ ತಲುಪಿಸುವುದು ಹೇಗೆ ಎನ್ನುವುದರ ಅರಿವು ಇರುವುದಿಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು. ಜಿಲ್ಲೆಯ ಹಿರಿಯ ಸಹಕಾರಿ ಧುರೀಣ ಕೂಡ್ಲೂರು ಗ್ರಾಮದ ಟಿ.ಆರ್. ಶರವಣಕುಮಾರ್ ಅವರ ‘ಪೂರ್ಣ ಚಂದ್ರ’ ನಿವಾಸದಲ್ಲಿ ಬೆಂಗಳೂರಿನ ರಂಗಮAಡಲ ಮತ್ತು ಕೊಡಗು ಕವಿ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾವ್ಯ ಸಂಸ್ಕ್ರತಿಯಾನ ಜನರೆಡೆಗೆ ಕಾವ್ಯ 8ನೇ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಕವಿಗಳು ಮತ್ತು ಕವನಗಳು ಉಳಿದುಕೊಳ್ಳಲು ಸಾಮಾಜಿಕ ಜಾಲತಾಣಗಳ ಕೊಡುಗೆ ಗಣನೀಯವಾಗಿದೆ ಎಲೆಕ್ಟಾçನಿಕ್ ಮಾಧ್ಯಮಗಳಲ್ಲಿ ಕವಿಗಳನ್ನು ಕಾಣುವುದು ಕೂಡ ಅಸಾಧ್ಯ ಎನ್ನುವ ವಾತಾವರಣ ಇದೆ. ಇನ್ನು ಮುಖ್ಯವಾಹಿನಿಯ ಮುದ್ರಣ ಮಾಧ್ಯಮಗಳು ಕವನಗಳನ್ನೇ ದೂರ ಇಟ್ಟಿವೆ. ಕೆಲವು ಮಾಧ್ಯಮಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಕೊಟ್ಟು, ಕವನ ಓದಲು ಈ ಕೋಡ್ ಸ್ಕಾö್ಯನ್ ಮಾಡಿ ಎನ್ನುತ್ತಾರೆ ಎಂದರು.
ಕಾವ್ಯ ಸಂಸ್ಕೃತಿ ಯಾನದ ಪ್ರಧಾನ ಸಂಚಾಲಕ ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಮಾತನಾಡಿ ಜಿಲ್ಲೆಯಿಂದ ಜಿಲ್ಲೆಗೆ, ಮನೆಯಿಂದ ಮನೆಗೆ ಕಾವ್ಯ ದೀವಟಿಗೆ ಹಚ್ಚಲು ಕಾವ್ಯಯಾನ ಕಾರ್ಯಕ್ರಮ ಆರಂಭಿಸಲಾಯಿತು. ಕವಿಗಳನ್ನು ಹೀಗೆ ಒಂದುಗೂಡಿಸಲು ಸಹಕರಿಸಿದ್ದು ಫೇಸ್‌ಬುಕ್. ಕೊರೊನಾ ಹುಟ್ಟಿಸಿದ ಭೀತಿಯನ್ನು ಓಡಿಸಿದ್ದೇ ಕವನಗಳು. ಹಾಗಾಗಿ ಕವನಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಲು ಸಂಕಲ್ಪ ಮಾಡಲಾಯಿತು ಎಂದು ಹೇಳಿದರು.
ರಾಮನಗರ ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, ಕಾವ್ಯ ಸರಳವಾಗಿ ಇರಬೇಕು. ಓದಿದ ತಕ್ಷಣ ಅರ್ಥ ಆಗಬೇಕು ಎನ್ನುವ ಭ್ರಮೆ ಬೇಡ. ಒಳ್ಳೆಯ ಕಾವ್ಯಗಳು ಯಾವಾಗಲೂ ಸರಳವಾಗಿ ಇರುವುದಿಲ್ಲ ಎಂದರು.
ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದ ಹಿರಿಯ ಕವಯತ್ರಿ ಸ್ಮಿತಾ ಅಮೃತರಾಜ್ ಮಾತನಾಡಿ, ಕಾವ್ಯದ ಧ್ವನಿ ಮತ್ತು ಆಶಯ ಒಂದೇ ಆಗಿರುತ್ತದೆ. ಕಾವ್ಯ ಮನುಷ್ಯನ್ನು ಮನುಷ್ಯರನ್ನಾಗಿಸಲಿ. ನಮ್ಮ ನಡುವಿನ ಬೇಲಿ ಕಿತ್ತೊಗೆಯಲಿ ಎನ್ನುವ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಟಿ.ಆರ್. ಶರವಣ ಕುಮಾರ್, ರೋಹಿಣಿ ಶರವಣಕುಮಾರ್, ಹಿರಿಯ ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ
ಕೆ.ಎಸ್. ಮೂರ್ತಿ, ಸಂಘಟಕರಾದ ರಂಗಸ್ವಾಮಿ ಸಿದ್ಧಯ್ಯ, ಕವಯತ್ರಿ ಕೃಪಾ ದೇವರಾಜ್, ಹೇಮಂತ್ ಪಾರೇರ ಇದ್ದರು.