ಕನ್ನಡ ಕಾವ್ಯ ರಸಗ್ರಹಣ ತರಗತಿ

BMSri
Published on

ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನವು ಏ. 29ರಿಂದ ಹಳಗನ್ನಡ ಮತ್ತು ಮಧ್ಯಕಾಲೀನ ಕಾವ್ಯ ರಸಗ್ರಹಣ ತರಗತಿಯನ್ನು ಹಮ್ಮಿಕೊಂಡಿದೆ.

ತರಗತಿಗಳು ಎಂಟು ತಿಂಗಳು ಪ್ರತಿ ಸೋಮವಾರ ಮತ್ತು ಗುರುವಾರ ಸಂಜೆ 5.30ರಿಂದ ಸಂಜೆ 7ರವರೆಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ನಡೆಯಲಿವೆ. ಕನ್ನಡದ ವಿದ್ವಾಂಸರಾದ ಪಿ.ವಿ. ನಾರಾಯಣ, ಆರ್.ಲಕ್ಷ್ಮೀನಾರಾಯಣ, ಕೆ.ಆರ್.ಗಣೇಶ, ರಾಜಪ್ಪ ದಳವಾಯಿ, ಸಿ.ಕೆ. ಜಗದೀಶ್, ಎನ್.ಆರ್.ಲಲಿತಾಂಬ, ಚಂದ್ರಶೇಖರ ನಾದೂರು, ಬೈರಮಂಗಲ ರಾಮೇಗೌಡ ಹಾಗೂ ಶಾಂತರಾಜು ಬೋಧನೆ ಮಾಡಲಿದ್ದಾರೆ.

ಆಸಕ್ತರು ಏ.25ರೊಳಗೆ ದೂರವಾಣಿ ಸಂಖ್ಯೆ 9972812127 ಅಥವಾ ಇ-ಮೇಲ್ ವಿಳಾಸ bmsritrustgmail.com ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net