ಕಾವೂರು ವ್ಯಾಯಾಮ ಮಾಡುತ್ತಿದ್ದಾಗ ಕುಸಿದು ಬಿದ್ದು ಮೃತ್ಯು

sucide
Published on

ಮಂಗಳೂರು: ನಗರದ ರಾಯಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರು ಶನಿವಾರ ವ್ಯಾಯಾಮ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.


ಜಿತೇಂದ್ರ ಯಾದವ್ ಮೃತಪಟ್ಟವರು.


ಪ್ರಕರಣ ವಿವರ: ಜಿತೇಂದ್ರ ಯಾದವ್ ಅವರು ಜೂ.8ರಂದು ಬೆಳಗ್ಗೆ 5.30ರ ವೇಳೆಗೆ ವ್ಯಾಯಾಮ ಮಾಡುತ್ತಿದ್ದಾಗ ಒಮ್ಮೇಲೆ ಕುಸಿದು ಬಿದಿದ್ದು, ನಂತರ ಅವರ ಸಂಬಂಧಿಕರ ರಿಕ್ಷಾವೊಂದರಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೂಡಲೇ ವೈದ್ಯರು ತಪಾಸಣೆ ನಡೆಸಿದ್ದು, ಜಿತೇಂದ್ರ ಅವರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.


ಕಾವೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net