ಮೌಲ್ಯಯುತ ಬದುಕಿಗೆ ಜಾಗೃತಿ ರೂಪಿಸುವ ಕಾರ್ಯ : ಭಾಸ್ಕರ ಆಚಾರ್ಯ ಆಶಯ

New Project (6)
Published on

ಪುತ್ತೂರು ಗ್ರಾಮಾಂತರ: ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರಿಗೆ ಆರ್ಥಿಕ, ಸಾಮಾಜಿಕ ಮಟ್ಟವನ್ನು ಉತ್ತಮಗೊಳಿಸುವುದು, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು, ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ಮೌಲ್ಯಯುತ ಬದುಕಿಗೆ ಜಾಗೃತಿ ರೂಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಸಂಘಟನೆಯಿಂದ ನಡೆಯಲಿ ಎಂದು ವಿಶ್ವಕರ್ಮ ಸಮಾಜದ ಹಿರಿಯರಾದ ಅರಿಯಡ್ಕ ಭಾಸ್ಕರ ಆಚಾರ್ಯ ಹೇಳಿದರು.

ಮಾಡ್ನೂರು ಗ್ರಾಮದ ಕಾವಿನಲ್ಲಿ ಇತ್ತೀಚೆಗೆ ‘ಕಾವು ವಿಶ್ವಕರ್ಮ ಮಿತ್ರ ಬಳಗ’ ಸಂಘಟನೆ ಉದ್ಘಾಟಿಸಿ ಮಾತನಾಡಿದರು.

ಪ್ರಮುಖರಾದ ನಾರಾಯಣ ಆಚಾರ್ಯ ಮಾಣಿಯಡ್ಕ, ಗೋಪಾಲ ಆಚಾರ್ಯ ಕಂಟ್ರಮಜಲು, ವಿಶ್ವಕರ್ಮ ಮಿತ್ರ ಬಳಗ ಉಪಾಧ್ಯಕ್ಷ ಪ್ರಮೋದ್ ಆಚಾರ್ಯ ಮಾಣಿಯಡ್ಕ, ಜತೆ ಕಾರ್ಯದರ್ಶಿ ಜಗದೀಶ್ ಆಚಾರ್ಯ ಪೆರ್ಲಂಪಾಡಿ, ಕೋಶಾಧಿಕಾರಿ ವೆಂಕಟ್ರಮಣ ಆಚಾರ್ಯ ಪೆರ್ಲಂಪಾಡಿ ಮತ್ತಿತರರಿದ್ದರು. ವಿಶ್ವಕರ್ಮ ಮಿತ್ರ ಬಳಗ ಅಧ್ಯಕ್ಷ ರವೀಂದ್ರ ಆಚಾರ್ಯ ಅರಿಯಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಬಾಲಕೃಷ್ಣ ಆಚಾರ್ಯ ಮಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net