ನೀರು ತುಂಬಿದ ಬಕೆಟ್‌ಗೆ ಬಿದ್ದು ಮಗು ಮೃತ್ಯು

crime
Published on

ಮಂಗಳೂರು: ನೀರು ತುಂಬಿದ ಬಕೆಟ್‌ಗೆ ಒಂದು ವರ್ಷ ಎಂಟು ತಿಂಗಳ ಹೆಣ್ಣು ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ಕಾವೂರಿನಲ್ಲಿ ನಡೆದಿದೆ.


ಕಾವೂರು ಮಸೀದಿ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಝಾರ್ಖಂಡ್ ಮೂಲದ ಫಿರೋಜ್ ಅನ್ಸಾರಿ ಎಂಬುವರ ಪುತ್ರಿ ಆಯಿಷಾ ಮೃತಪಟ್ಟ ಮಗು. ಬುಧವಾರ ಸಂಜೆ ಮನೆಯಲ್ಲಿ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಮಗು ಮೃತಪಟ್ಟಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net