

ವಿಜಯವಾಣಿ ಸುದ್ದಿಜಾಲ ಧಾರವಾಡ
ಲಂಡನ್ ಮೂಲದ ದಿ ಟೈಮ್ಸ್ ಹೈಯರ್ ಎಜ್ಯುಕೇಶನ್ ಟೈಮ್ಸ್ ಹೈಯರ್ ಎಜ್ಯುಕೇಶನ್ ಮ್ಯಾಗಝೀನ್ ಪ್ರಸಕ್ತ ಸಾಲಿಗೆ (2024) ಏಷಿಯಾದ ಟಾಪ್ ವಿಶ್ವ ವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ 19 ಸರ್ಕಾರಿ ವಿವಿಗಳಲ್ಲಿ ಕವಿವಿ 400 ರಿಂದ 500ನೇ ಹಂತದ ಶ್ರೇಣಿಯ ರ್ಯಾಂಕಿಂಗ್ ಪಡೆದಿದೆ ಎಂದು ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಷಿಯಾದ ಒಟ್ಟು 31 ರಾಷ್ಟ್ರಗಳ ವಿಶ್ವ ವಿದ್ಯಾಲಯಗಳ ಬೊಧನೆ, ಸಂಶೋಧನೆ ಪರಿಸರ ಮತ್ತು ಗುಣಮಟ್ಟ, ಕೈಗಾರಿಕೆ ಮತ್ತು ಅಂತರಾಷ್ಟ್ರೀಯ ದೃಷ್ಟಿಕೋನ ಸೇರಿ ಒಟ್ಟು ಪ್ರಮುಖ ಐದು ವಿಷಯ ಮಾಪನ ಒಳಗೊಂಡ 18 ಸೂಚ್ಯಂಕಗಳ ಮಾನದಂಡಗಳಲ್ಲಿ ಜಾಗತಿಕ ವಿಶ್ವ ವಿದ್ಯಾಲಯಗಳ 3.0 ಸಂಶೋಧನಾ ಪದ್ಧತಿಯಲ್ಲಿ ಸರ್ವೇ ಮಾಡಲಾಗಿದೆ. ಇದರಲ್ಲಿ ಕರ್ನಾಟಕ ಮೈಸೂರು ವಿವಿ ಸೇರಿ ಇತರ ಅನೇಕ ಖಾಸಗಿ ವಿವಿಗಳನ್ನು ಹಿಂದಿಕ್ಕಿರುವ ಕವಿವಿ, ಉತ್ತಮ ರ್ಯಾಂಕಿಂಗ್ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.