

ಕವಿತಾಳ: ವಿದ್ಯಾರ್ಥಿಗಳು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಆರ್ ಕಂಪನಿಯಿಂದ ಸರ್ಕಾರಿ ಪ್ರೌಢ ಶಾಲೆಗಳಿಗೆ ಉಚಿತವಾಗಿ ವಿತರಿಸಿರುವ 15 ಲಕ್ಷ ರೂ. ಮೊತ್ತದ ಕಂಪ್ಯೂಟರ್, ಪ್ರೋಜೆಕ್ಟರ್ ಉಪಕರಣಗಳ ವಿತರಿಸಲಾಗಿದೆ. ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಳ್ಳಲಿ ಎಂದು ಡಿಡಿಪಿಐ ಕೆ.ಡಿ.ಬಡಿಗೇರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಂಪ್ಯೂಟರ್ ಹಾಗೂ ಪ್ರೋಜೆಕ್ಟರ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ತಂತ್ರಜ್ಞಾನದ ಪ್ರೋಜೆಕ್ಟರ್‌ಗಳಿಂದ ತಂತ್ರಜ್ಞಾನದ ಮಾಹಿತಿ ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದರು.
ತಹಸೀಲ್ದಾರ್ ಅಶೋಕ ಪವಾರ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆ, ಸ್ಥಾನವನ್ನು ಪಡೆಯುವಂತಾಗಬೇಕು. ಮುಂದಿನ ಬಾರಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಂಪನಿಯ ಪ್ರೋಜೆಕ್ಟ್ ಮ್ಯಾನೇಜರ್ ಲಕ್ಷ್ಮೀಕಾಂತ ಗೋಣಿ ಮಾತನಾಡಿದರು. ಕವಿತಾಳ ಬಾಲಕಿಯರ ಪ್ರೌಢಶಾಲೆ, ಚಿಕ್ಕ ಹೆಸರೂರು ಶಾಲೆ, ಪಾಮನಕಲ್ಲೂರು ಶಾಲೆ, ಹಿರೆಹಣಗಿ ಶಾಲೆಗಳಿಗೆ ಪ್ರೋಜೆಕ್ಟರ್ ಕಿಟ್‌ಗಳನ್ನು ವಿತರಿಸಲಾಯಿತು.
ಲಿಂಗಸಗೂರು ತಹಸೀಲ್ದಾರ್ ಸತ್ಯಮ್ಮ, ಶಿಕ್ಷಕ ಸಿದ್ದರಾಮಯ್ಯ, ಹಿರೇಹಣಗಿ ಮುಖ್ಯಶಿಕ್ಷಕ ಅಮರೇಶ ಪಾಟೀಲ್, ಪಾಮನಕಲ್ಲೂರು ಮುಖ್ಯಶಿಕ್ಷಕ ಬಸವರಾಜ, ಮಲ್ಲಟ ಶಾಲೆ ಮುಖ್ಯಶಿಕ್ಷಕ ಶಾಂತಪ್ಪ ಪವಾರ್, ಚಿಕ್ಕ ಹೆಸರೂರು ಮುಖ್ಯಶಿಕ್ಷಕ, ಶರಣೇಗೌಡ, ದೈಹಿಕ ಶಿಕ್ಷಕ ಗಿರೀಶ, ಶಿಕ್ಷಕ ಪ್ರಾಣೇಶ ಇತರರಿದ್ದರು.