ತುಂಬಿಹರಿಯುತ್ತಿದೆ ಆನಂದಗಲ್ ಹಳ್ಳ, ಸೇತುವೆ ದಾಟಲು ಗ್ರಾಮಸ್ಥರ ಪರದಾಟ

Shashidhara L
ಕವಿತಾಳ ಬಳಿಯ ಆನಂದಗಲ್ ಗ್ರಾಮದ ಹಳ್ಳದ ಸೇತುವೆ ಮೇಲೆ ನೀರು ಬಂದಿದ್ದು, ಜನ ದಾಟಲು ಪರದಾಡುತ್ತಿರುವುದು.
Published on

ಕವಿತಾಳ: ಆನಂದಗಲ್ ಗ್ರಾಮದ ಹಳ್ಳ ತುಂಬಿಹರಿಯುತ್ತಿರುವುದರಿಂದ ಅದನ್ನು ದಾಟಲು ಜನ ಮಂಗಳವಾರ ಪರದಾಡುವಂತಾಯಿತು. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ವರೆಗೆ ಸತತ ಮಳೆ ಸುರಿದ ಪರಿಣಾಮ ಹಳ್ಳ ತುಂಬಿ ಹರಿಯುತ್ತಿದೆ. ಸೇತುವೆ ನಿರ್ಮಿಸುವ ಸಲುವಾಗಿ ಹಳ್ಳದ ಮಾರ್ಗ ಬದಲಿಸಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಇದು ಮುಖ್ಯ ರಸ್ತೆಯಾಗಿದ್ದು, ಪಾಮನಕಲ್ಲೂರು, ಆನಂದಗಲ್, ಗುಡಿಹಾಳ, ಚಿಲ್ಕರಾಗಿ, ಹಾಲಪುರ, ಮಸ್ಕಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಾರಂಭದಲ್ಲೇ ಗುತ್ತಿಗೆದಾರರು, ಅಧಿಕಾರಿಗಳು ಸರಿಯಾಗಿ ಕಾಮಗಾರಿ ಮಾಡಬೇಕಿತ್ತು ಎಂದು ಗ್ರಾಮಸ್ಥರಾದ ಸುಂಡೆಪ್ಪ ಹರಿಜನ, ಮಲ್ಲಪ್ಪ, ಭೀಮೇಶ ಇತರರು ಹೇಳಿದ್ದಾರೆ.

ಆನಂದಗಲ್ ರಸ್ತೆ ಕಾಮಗಾರಿಗೆ ಲೋಕೊಪಯೋಗಿ ಇಲಾಖೆಯ ಅನುದಾನದಡಿ 66 ಲಕ್ಷ ರೂ. ವೆಚ್ಚದ ಸೇತುವೆ ಕಾಮಗಾರಿ ನಡೆಯುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಯೋಜನೆಯಂತೆಯೇ ಕೆಲಸ ಮಾಡಿಸಲಾಗುವುದು.
| ಗಜಾನನ ಲೋಕೋಪಯೋಗಿ ಇಲಾಖೆ ತಾಲೂಕಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net