ಮುಸ್ಲಿಂ ಚಿಣ್ಣರಿಗೆ ಸಾಮೂಹಿಕ ಮುಂಜಿ

21022022 Kavital mass munjii
Published on

ಕವಿತಾಳ: ಸಮೀಪದ ಚಿಂಚರಕಿ ಗ್ರಾಮದ ಜಾಮಿಯಾ ಮಸೀದಿಯಲ್ಲಿ ಭಾನುವಾರ ಮುಸ್ಲಿಂ ಚಿಣ್ಣರಿಗೆ ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಎಪಿಎಂಸಿ ಮಾಜಿ ಸದಸ್ಯ ಎಂ.ಡಿ.ಆರ್.ಅಮ್ಜದ್ ಹುಸೇನ್ ಸೇಠ್ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಿ ಮಾತನಾಡಿದರು. ಮುಸ್ಲಿಂ ಸಮುದಾಯದಲ್ಲಿ ಮುಂಜಿ ಸಾಂಪ್ರದಾಯಿಕ ಪ್ರಕ್ರಿಯೆಯಾಗಿದ್ದು, ಈ ಧಾರ್ಮಿಕ ಕೈಂಕರ್ಯಕ್ಕೆ ಹೆಚ್ಚಿನ ಮಹತ್ವವಿದೆ. ಪ್ರತಿ ವರ್ಷ ವಿವಿಧೆಡೆ ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮಗಳನ್ನು ನಮ್ಮ ಕುಟುಂಬದಿಂದ ಆಯೋಜನೆ ಮಾಡುತ್ತಿದ್ದೇವೆ ಎಂದರು.

ಜಾಮಿಯಾ ಮಸೀದಿ ಮುತುವಲ್ಲಿ ಮಹಿಬೂಬ್‌ಸಾಬ್, ಗ್ರಾಪಂ ಸದಸ್ಯರಾದ ಹರಳಯ್ಯ ಗುತ್ತೇದಾರ್, ವೀರೇಶ ಹಿರೇಮಠ, ದುರಗೇಶ, ಪ್ರಮುಖರಾದ ಸಂಗಯ್ಯಸ್ವಾಮಿ ಹಿರೇಮಠ, ಅಮರಣ್ಣಗೌಡ ತಾತರಡ್ಡಿ, ಕಾಶಪ್ಪ ದೊಡ್ಡಮನಿ, ಖಾಜಾಸಾಬ್ ದೊಡ್ಡಮನಿ, ಹಫೀಜ್‌ಸಾಬ್, ಮುಸ್ಲಿಂ ಸಮುದಾಯದ ಮುಖಂಡರಾದ ಅಬ್ದುಲ್, ಆರ್.ಆರ್. ಹುಸೇನ್ ಬಾಷಾ, ಅಬ್ದುಲ್, ಬಾಬು, ಮೈಬುಸಾಬ್, ದಸ್ತಗೀರ್‌ಸಾಬ್, ಚಾಂದ್‌ಪಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net