ಸಾಮೂಹಿಕ ವಿವಾಹದಿಂದ ಬಡತನ ದೂರ

Kavital ambedkar jayanti
ಹಿರೇಹಣಗಿಯಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನವಲಕಲ್ ಮಠದ ಸೋಮನಾಥ ಶಿವಚಾರ್ಯರು ಉದ್ಘಾಟಿಸಿದರು. ಆದಿ ಜಾಂಬವ ಮಠದ ಷಡಕ್ಷರಯ್ಯ ಸ್ವಾಮೀಜಿ, ಮಮತೆ ಪೌಂಡೇಶನ್ ಅಧ್ಯಕ್ಷ ಪೆದ್ದಪ್ಪ ವಕೀಲ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ತಾಲೂಕು ವಕೀಲ ಸಂಘದ ಅಧ್ಯಕ್ಷ ರವಿಕುಮಾರ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಬಾಯಿ, ಪ್ರಮುಖರಾದ ಲೋಕರಡ್ಡಿ ಸಿರವಾರ, ಅಮರೇಗೌಡ ಹಣಗಿ ಇತರರಿದ್ದರು.
Published on

ಕವಿತಾಳ: ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಡಿದ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದು ನವಲಕಲ್ ಮಠದ ಸೋಮನಾಥ ಶಿವಚಾರ್ಯರು ಹೇಳಿದರು.

ಸಮೀಪದ ಹಿರೇಹಣಗಿಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ನಿಮಿತ್ತ ಮಮತೆ ಫೌಂಡೇಶನ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮೂಹಿಕ ವಿವಾಹದಿಂದ ಬಡತನ ಮತ್ತು ಅಸಮಾನತೆ ತೊಲಗಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಆದಿ ಜಾಂಬವ ಮಠದ ಷಡಕ್ಷರಯ್ಯ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಜಾತಿಯತೆ ತೊಲಗಿಸಲು ಬಸವಣ್ಣ 12ನೇ ಶತಮಾನದಲ್ಲಿಯೇ ಹೋರಾಟ ಮಾಡಿದರು. ಇಂದಿಗೂ ಜಾತಿ ವ್ಯವಸ್ಥೆ ಇರುವುದು ದುರ್ದೈವ. ಸಾಮೂಹಿಕ ವಿವಾಹ ಸಮಾಜಕ್ಕೆ ಉತ್ತಮ ಸಂದೇಶ ಎಂದರು. ಎಂಟು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಬಸವರಾಜ ಕವಿತಾಳ, ಗ್ರಾಪಂ ಅಧ್ಯಕ್ಷೆ ದೇವಮ್ಮ ದುರುಗಣ್ಣ, ಉಪಾಧ್ಯಕ್ಷೆ ಶ್ರುತಿ, ಮಮತೆ ಫೌಂಡೇಶನ್ ಅಧ್ಯಕ್ಷ ಪೆದ್ದಪ್ಪ ವಕೀಲ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ತಾಲೂಕು ವಕೀಲ ಸಂಘದ ಅಧ್ಯಕ್ಷ ರವಿಕುಮಾರ, ಪ್ರಮುಖರಾದ ಶಿವರಾಜಯ್ಯಸ್ವಾಮಿ ಶಿವಣ್ಣ ಪೂಜಾರಿ, ಹುಸೆನಪ್ಪ ಬಾಗಲವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net